ಬರ್ನಾನ್ ಯಾದರಿಗಿರಿ ತಂದೆ ಗುನ್ನಯ್ಯ ಹೈದರಾಬಾದ್ ನಲ್ಲಿ ದಿನಗೂಲಿ ನೌಕರರಾಗಿ ಕೆಲಸ ಮಾಡುತ್ತಿದ್ದಾರೆ. ಸಿಮೆಂಟ್ ಫ್ಯಾಕ್ಟರಿಯಲ್ಲಿ ದಿನಗೂಲಿ ನೌಕರರಾಗಿದ್ದು ದಿನಕ್ಕೆ 100 ರು. ಕೂಲಿ ಪಡೆಯುತ್ತಿದ್ದಾರೆ. ತಾಯಿ ಪೋಲಿಯೋ ಪೀಡಿತೆಯಾಗಿದ್ದು ಮನೆಯಲ್ಲಿನ ಕಡುಬಡತನದಿಂದ ಖರ್ಚುಗಳನ್ನು ಸರಿದೂಗಿಸಲು ಸ್ಥಳೀಯ ಕಚೇರಿಗಳಲ್ಲಿ ಮೇಜು ಒರೆಸುವುದು ಗುಡಿಸುವುದು ಮಾಡುತ್ತಿದ್ದರು.