ಮಾದಕದ್ರವ್ಯ ಕಳ್ಳ ಸಾಗಣೆ ಬಗ್ಗೆ ಮಾಹಿತಿ ನೀಡಿ, ಬಹುಮಾನ ಗೆಲ್ಲಿ!

ಮಾದಕದ್ರವ್ಯಗಳ ಕಳ್ಳ ಸಾಗಣೆ ಬಗ್ಗೆ ಸರ್ಕಾರಕ್ಕೆ ಮಾಹಿತಿ ನೀಡುವವರಿಗೆ ಬಹುಮಾನ ನೀಡುವುದಾಗಿ ಕೇಂದ್ರ ಗೃಹ ಇಲಾಖೆ ಘೋಷಣೆ ಮಾಡಿದೆ.
ಮಾದಕ ದ್ರವ್ಯ
ಮಾದಕ ದ್ರವ್ಯ
ನವದೆಹಲಿ: ಮಾದಕದ್ರವ್ಯಗಳ ಕಳ್ಳ ಸಾಗಣೆ ಬಗ್ಗೆ ಸರ್ಕಾರಕ್ಕೆ ಮಾಹಿತಿ ನೀಡುವವರಿಗೆ ಬಹುಮಾನ ನೀಡುವುದಾಗಿ ಕೇಂದ್ರ ಗೃಹ ಇಲಾಖೆ ಘೋಷಣೆ ಮಾಡಿದೆ.  
ಡಿ.12 ರಂದು ಮಾದಕ ದ್ರವ್ಯಗಳ ಪಟ್ಟಿಯನ್ನು ಬಿಡುಗಡೆ ಮಾಡಿರುವ ಕೇಂದ್ರ ಗೃಹ ಇಲಾಖೆ, ಪಟ್ಟಿಯಲ್ಲಿರುವ ಮಾದಕ ದ್ರವ್ಯಗಳ ಕಳ್ಳ ಸಾಗಣೆ ಬಗ್ಗೆ ಮಾಹಿತಿ ನೀಡಿ, ಮಾದಕ ದ್ರವ್ಯ ಕಳ್ಳಸಾಗಣೆ ಪತ್ತೆ ಹೆಚ್ಚಲು ನೆರವಾದರೆ ಮಾಹಿತಿ ನೀಡಿದವರಿಗೆ ವಶಪಡಿಸಿಕೊಂಡ ಮಾದಕ ದ್ರವ್ಯದ ಪ್ರಮಾಣದ ಆಧಾರದಲ್ಲಿ ಕನಿಷ್ಠ 240 ರೂ ಗಳಿಂದ  ಗರಿಷ್ಠ 2.40 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಗೃಹ ಇಲಾಖೆ ಘೋಷಿಸಿದೆ. 
ಒಂದು ಕೆಜಿ ಕೊಕೇನ್ ಸಾಗಣೆ ಬಗ್ಗೆ ಮಾಹಿತಿ ನೀಡಿದರೆ ಗರಿಷ್ಠ 2.40 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಗೃಹ ಇಲಾಖೆ ತಿಳಿಸಿದೆ. ಒಂದು ಕೆಜಿಯಷ್ಟು ಹೆರಾಯಿನ್ ಗೆ 1.20 ಲಕ್ಷ ರೂಪಾಯಿ. ಅಫೀಮಿಗೆ 6,000 ರೂಪಾಯಿ ಹೀಗೆ ವಿವಿಧ ಮಾದಕ ದ್ರವ್ಯಗಳಿಗೆ ಕೇಂದ್ರ ಗೃಹ ಇಲಾಖೆ ಒಂದೊಂದು ರೀತಿಯ ಬಹುಮಾನದ ದರ ನಿಗದಿಪಡಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com