ರಾಜಸ್ತಾನದಲ್ಲಿ ದರೋಡೆಕೋರರ ಗುಂಡಿಗೆ ಚೆನ್ನೈ ಪೊಲೀಸ್ ಇನ್ಸ್ ಪೆಕ್ಟರ್ ಬಲಿ

ಚಿನ್ನ ದರೋಡೆ ಪ್ರಕರಣದ ತನಿಖೆ ನಡೆಸುತ್ತಿದ್ದ ಚೆನ್ನೈನ ಪೊಲೀಸ್ ಇನ್ಸ್ ಪೆಕ್ಟರ್ ಒಬ್ಬರನ್ನು ಗುಂಡಿಕ್ಕಿ ಹತ್ಯೆ ಮಾಡಿದ ಘಟನೆ ಬುಧವಾರ....
ಪೆರಿಯಪೆಂಡಿ
ಪೆರಿಯಪೆಂಡಿ
ಚೆನ್ನೈ: ಚಿನ್ನ ದರೋಡೆ ಪ್ರಕರಣದ ತನಿಖೆ ನಡೆಸುತ್ತಿದ್ದ ಚೆನ್ನೈನ ಪೊಲೀಸ್ ಇನ್ಸ್ ಪೆಕ್ಟರ್ ಒಬ್ಬರನ್ನು ಗುಂಡಿಕ್ಕಿ ಹತ್ಯೆ ಮಾಡಿದ ಘಟನೆ ಬುಧವಾರ ರಾಜಸ್ತಾನದಲ್ಲಿ ನಡೆದಿದೆ.
ದರೋಡೆಕೋರರನ್ನು ಬಂಧಿಸುವುದಕ್ಕಾಗಿ ಚೆನ್ನೈ ಪೊಲೀಸ್ ಇನ್ಸ್ ಪೆಕ್ಟರ್ ಪೆರಿಯಪಂಡಿ ನೇತೃತ್ವದ ತಂಡ ರಾಜಸ್ತಾನದ ಪಾಲಿ ಜಿಲ್ಲೆಗೆ ತೆರಳಿತ್ತು, ಈ ವೇಳೆ ಶಂಕಿತ ದರೋಡೆಕೋರರ ಬೆನ್ನಟ್ಟಿ ಹೋಗಿದ್ದ ಪೆರಿಯಪಂಡಿ ಅವರನ್ನು ಅವರದ್ದೇ ರಿವಾಲ್ವರ್ ನಿಂದ ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ.
ಚೆನ್ನೈನ ಮದುರಾವೋಯಲ್ ಠಾಣೆಯಲ್ಲಿ ಅವರು ಕರ್ತವ್ಯ ನಿರ್ವಹಿಸುತ್ತಿದ್ದ ಪೆರಿಯಪಂಡಿ ಅವರು, ಕಳೆದ ತಿಂಗಳು ಕೊಲಾಥೂರ್ ಎಂಬಲ್ಲಿ ಸುರಂಗ ತೋಡಿ 3.5 ಕೆಜಿ ಚಿನ್ನ ದೋಚಿದ್ದ ಪ್ರಕರಣದ ತನಿಖೆ ನಡೆಸುತ್ತಿದ್ದರು.
ರಾಜಸ್ತಾನದ ಮರುಭೂಮಿಯ ಸಮೀಪ ದರೋಡೆಕೋರರು ಅಡಗಿರುವ ಬಗ್ಗೆ ಮಾಹಿತಿ ಸಿಕ್ಕಿತ್ತು. ಅವರಲ್ಲಿ ಒಬ್ಬನನ್ನು ಇನ್ಸ್ ಪೆಕ್ಟರ್ ಹಿಡಿದಿದ್ದರು. ಹೊರಕ್ಕೆ ಕರೆದುಕೊಂಡು ಬರುತ್ತಿರುವಾಗ ಆತ ರಿವಾಲ್ವರ್ ಕಸಿದುಕೊಂಡು ಪೊಲೀಸರ ಮೇಲೆ ಗುಂಡು ಹಾರಿಸಿದ್ದಾನೆ.
ಇನ್ಸ್ ಪೆಕ್ಟರ್ ಸ್ಥಳದಲ್ಲೇ ಮೃತಪಟ್ಟಿದ್ದು, ಜೊತೆಗಿದ್ದ ಪೊಲೀಸರಿಗೆ ಗಾಯಗಳಾಗಿವೆ. ಇಂದು ಬೆಳಗಿನ ಜಾವ 2.30ರ ವೇಳೆಗೆ ಈ ಘಟನೆ ನಡೆದಿದೆ. ದರೋಡೆಕೋರ ಎಸ್ಕೇಪ್ ಆಗಿದ್ದಾನೆ. ನವೆಂಬರ್ 16ರಂದು ಚೆನ್ನೈನ ಆಭರಣ ಮಳಿಗೆಯಲ್ಲಿ ಕಳ್ಳತನ ನಡೆದಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com