ಒನ್ ಮ್ಯಾನ್ ಶೋ, 2 ಮೆನ್ ಆರ್ಮಿ: ಪ್ರಧಾನಿ ಮೋದಿ ವಿರುದ್ಧ ಶತೃಘ್ನ ಸಿನ್ಹಾ ಮತ್ತೊಮ್ಮೆ ಟೀಕೆ

ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಬಿಜೆಪಿ ನಾಯಕ ಶತೃಘ್ನ ಸಿನ್ಹಾ ಮತ್ತೊಮ್ಮೆ ಟೀಕಾಪ್ರಹಾರ ನಡೆಸಿದ್ದು....
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ
Updated on: 
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಬಿಜೆಪಿ ನಾಯಕ ಶತೃಘ್ನ ಸಿನ್ಹಾ ಮತ್ತೊಮ್ಮೆ ಟೀಕಾಪ್ರಹಾರ ನಡೆಸಿದ್ದು, ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಷಾ ಅವರನ್ನುದ್ದೇಶಿಸಿ " ಗುಜರಾತ್ ನಲ್ಲಿ ಒನ್ ಮ್ಯಾನ್ ಶೋ ಹಾಗೂ 2 ಮೆನ್ ಆರ್ಮಿಯ ತಂತ್ರಗಳು, ಕೋಪೋದ್ರೇಕಗಳು, ತಪ್ಪು ಹೆಳಿಕೆಗಳು, ಭರಪೂರ ಭರವಸೆಗಳು ಮುಕ್ತಾಯಗೊಂಡಿದ್ದರೆ ವಾಪಸ್ ದೆಹಲಿಗೆ ಬರಲಿ ಎಂದು ವ್ಯಂಗ್ಯವಾಡಿದ್ದಾರೆ. 
ಗುಜರಾತ್ ನಲ್ಲಿ ನಿಮ್ಮ ತಂತ್ರಗಳು, ಕೋಪೋದ್ರೇಕಗಳು, ತಪ್ಪು ಹೆಳಿಕೆಗಳು, ಭರಪೂರ ಭರವಸೆಗಳು ಮುಕ್ತಾಯಗೊಂಡಿದ್ದರೆ ದೆಹಲಿಗೆ ವಾಪಸ್ ಬಂದು, ಸಚಿವರುಗಳನ್ನೂ ವಾಪಸ್ ಕರೆಸಿಕೊಳ್ಳಬೇಕೆಂದು ನಮ್ಮ ಒನ್ ಮ್ಯಾನ್ ಶೋ, 2 ಮೆನ್ ಆರ್ಮಿಗೆ ವಿನಮ್ರವಾಗಿ ಪ್ರಾರ್ಥಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ. 
ನಾವು ಗುಜರಾತ್ ನಲ್ಲಿ ಗೆದ್ದರೆ ಯಾರಿಗೆ ಅದರ ಕೀರ್ತಿ ಸಲ್ಲುತ್ತದೆ ಎಂಬುದು ಗೊತ್ತೇ ಇದೆ, ಒಂದು ವೇಳೆ ಸೋತರೆ ಆ ಹೊಣೆ ಯಾರು ಹೊರುತ್ತಾರೆ? ಚಪ್ಪಾಳೆ ತಂಡದ ನಾಯಕನಿಗೆ ಸಲ್ಲುವುದಾದರೆ ಸೋಲಿನ ಹೊಣೆಯೂ ತಂಡದ ನಾಯಕನದ್ದೇ, ಗುಜರಾತ್ ನಲ್ಲಿ ನಮಗೆ ಚಪ್ಪಾಳೆಯೇ ಸಿಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಶತೃಘ್ನ ಸಿನ್ಹಾ ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com