ಜಯಲಲಿತಾ
ಜಯಲಲಿತಾ

ಜಯಲಲಿತಾ ಅವರನ್ನು ಉಸಿರುಗಟ್ಟಿದ ಸ್ಥಿತಿಯಲ್ಲಿ ಆಸ್ಪತ್ರೆಗೆ ಕರೆತರಲಾಗಿತ್ತು: ಅಪೋಲೋ ಆಸ್ಪತ್ರೆ ಉಪಾಧ್ಯಕ್ಷೆ

ಈಗ ಅಪೋಲೋ ಆಸ್ಪತ್ರೆಯ ಉಪಾಧ್ಯಕ್ಷರು ಜಯಲಲಿತಾ ಅವರ ಬಗ್ಗೆ ಮತ್ತೊಂದು ಮಾಹಿತಿ ಬಹಿರಂಗಪಡಿಸಿದ್ದು, ಜಯಲಲಿತಾ ಅವರನ್ನು ಉಸಿರಾಟ ಇಲ್ಲದ ಸ್ಥಿತಿಯಲ್ಲಿ ಆಸ್ಪತ್ರೆಗೆ ಕರೆತರಲಾಗಿತ್ತು ಎಂದು ಹೇಳಿದ್ದಾರೆ.
ಚೆನ್ನೈ: ತಮಿಳುನಾಡು ಮಾಜಿ ಸಿಎಂ ಜಯಲಲಿತಾ ಮೃತಪಟ್ಟ ಒಂದು ವರ್ಷದ ನಂತರವೂ ಅವರ ಸಾವಿಗೆ ಸಂಬಂಧಿಸಿದಂತೆ ಒಂದೊಂದು ಹೊಸ ಮಾಹಿತಿ ಬಹಿರಂಗವಾಗುತ್ತಲೇ ಇದೆ. ಈಗ ಅಪೋಲೋ ಆಸ್ಪತ್ರೆಯ ಉಪಾಧ್ಯಕ್ಷರು ಜಯಲಲಿತಾ ಅವರ ಬಗ್ಗೆ ಮತ್ತೊಂದು ಮಾಹಿತಿ ಬಹಿರಂಗಪಡಿಸಿದ್ದು, ಜಯಲಲಿತಾ ಅವರನ್ನು ಉಸಿರುಗಟ್ಟಿದ ಸ್ಥಿತಿಯಲ್ಲಿ ಆಸ್ಪತ್ರೆಗೆ ಕರೆತರಲಾಗಿತ್ತು ಎಂದು ಹೇಳಿದ್ದಾರೆ. 
ಕಳೆದ ವರ್ಷ ಸೆ.22 ರಂದು ಜಯಲಲಿತಾ ಅವರನ್ನು ಆಸ್ಪತ್ರೆಗೆ ಕರೆತಂದಾಗ ಅವರಿಗೆ ಉಸಿರಾಟ ಇರಲಿಲ್ಲ ಎಂದು ಆಸ್ಪತ್ರೆಯ ಉಪಾಧ್ಯಕ್ಷರಾದ ಪ್ರೀತಾ ರೆಡ್ಡಿ ಹೇಳಿದ್ದಾರೆ. ಜಯಲಲಿತಾ ಅವರನ್ನು ಉಸಿರುಗಟ್ಟಿದ  ಸ್ಥಿತಿಯಲ್ಲಿ ಆಸ್ಪತ್ರೆಗೆ ಕರೆತರಲಾಗಿತ್ತು, ಸೂಕ್ತ ಚಿಕಿತ್ಸೆ ನಂತರ ಚೇತರಿಸಿಕೊಂಡಿದ್ದರು. ಆದರೆ ಎಲ್ಲರೂ ಏನನ್ನು ಎದುರು ನೋಡುತ್ತಿದ್ದರೋ ಅದು ಅಂತಿಮವಾಗಿ ಫಲಿಸಲಿಲ್ಲ ಎಂದು ಪ್ರೀತಾ ರೆಡ್ಡಿ ಹೇಳಿದ್ದಾರೆ. 
ಜಯಲಲಿತಾ ಅವರ ಸಾವಿನ ಬಗ್ಗೆ ವಿವಾದ ಉಂಟಾಗಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪ್ರೀತಾ ರೆಡ್ಡಿ, ಆಸ್ಪತ್ರೆಯಲ್ಲಿ ಜಯಲಲಿತಾ ಅವರಿಗೆ ನವದೆಹಲಿ ಹಾಗೂ ವಿದೇಶದಿಂದ ಅತ್ಯುತ್ತಮ ವೈದ್ಯರಿಂದ ಚಿಕಿತ್ಸೆ ಕೊಡಿಸಲಾಗಿತ್ತು ಎಂದು ಹೇಳಿದ್ದಾರೆ. 

Related Stories

No stories found.

Advertisement

X
Kannada Prabha
www.kannadaprabha.com