ಈ ವೇಳೆ ಅಲ್ಲಿ ನೆರೆದಿದ್ದ ಜನಸ್ತೋಮವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಸಿಕ್ಕಿಂ ತ್ರಿಪುರಾ ಬಳಿಕ ಮಿಜೋರಾಂ ಈಶಾನ್ಯ ಭಾರತದಲ್ಲಿ ವಿದ್ಯುತ್ ರಫ್ತು ಮಾಡುವ ಮೂರನೇ ರಾಜ್ಯವಾಗಿದೆ ಎಂದು ಹೇಳಿದರು. ಅಂತೆಯೇ ಈಶಾನ್ಯ ಭಾರತದ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಸದಾ ಸಿದ್ಧವಿದ್ದು, ಇದಕ್ಕಾಗಿ ಹಲವು ಯೋಜನೆಗಳನ್ನು ಪ್ರಕಟಿಸಿದೆ ಮತ್ತು ಅವುಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಕ್ರಮ ಕೈಗೊಂಡಿದೆ. ಇಂದು ತುಯಿರಿಯಲ್ ಜಲವಿದ್ಯುತ್ ಯೋಜನೆ ಉದ್ಘಾಟನೆ ಮೂಲಕ ನಾವು ಮಹತ್ವದ ಮೈಲುಗಲ್ಲು ಸ್ಥಾಪನೆ ಮಾಡಿದ್ದು, ಈ ಯೋಜನೆ ಮೂಲಕ ಮಿಜೋರಾಂನಲ್ಲಿ 60 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆಯಾಗಲಿದೆ. ಆ ಮೂಲಕ ಸಿಕ್ಕಿಂ ತ್ರಿಪುರಾ ಬಳಿಕ ಈಶಾನ್ಯ ಭಾರತದಲ್ಲಿ ಮಿಜಾರಾಂ ವಿದ್ಯುತ್ ರಫ್ತು ಮಾಡುವ ಮೂರನೇ ರಾಜ್ಯವಾಗಲಿದೆ ಎಂದು ಪ್ರಧಾನಿ ಮೋದಿ ಹೇಳಿದರು.