ಯೋಗಿ ಆದಿತ್ಯನಾಥ್ ನೇತೃತ್ವದ ರಾಜ್ಯ ಸರ್ಕಾರ ಕೃಷ್ಣನ ಕಾಲಾವಧಿಯಲ್ಲಿದ್ದ ಗಾಯನ, ವಾದನ, ನೃತ್ಯ ಕ್ಕೆ ಸಂಬಂಧಿಸಿದ ಸಂಶೋಧನಾ ಕೇಂದ್ರವನ್ನು ಸ್ಥಾಪಿಸಲಿದೆ ಎಂದು ಚೌಧರಿ ತಿಳಿಸಿದ್ದಾರೆ. ಸರ್ಕಾರಿ ವಸ್ತು ಸಂಗ್ರಹಾಲಯದ 144ನೇ ವರ್ಷಾಚರಣೆ ಕಾರ್ಯಕ್ರಮದ್ಲಲಿ ಭಾಗಿಯಾಗಿ ಮಾತನಾಡಿದ ಅವರು, ಮಥುರಾದ ಬ್ರಿಜ್ ಭಾಷೆಯಷ್ಟು ಸುಂದರವಾದ ಭಾಷೆ ಪ್ರಪಂಚದ ಬೇರೆಡೆ ಎಲ್ಲೂ ಸಿಗುವುದಿಲ್ಲ ಹಾಗೂ ಮಥುರಾ ಪ್ರಪಂಚಕ್ಕೆ ಕೊಟ್ಟಷ್ಟು ಕಲೆಯನ್ನು ಬೇರೆ ಎಲ್ಲೂ ಕಾಣಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.