ತಮಿಳುನಾಡು ಪೊಲೀಸ್ ಹತ್ಯೆ: ಮತ್ತೊಬ್ಬ ಪೊಲೀಸ್ ವಿರುದ್ಧ ದೂರು ದಾಖಲಿಸಿದ ರಾಜಸ್ತಾನ ಪೊಲೀಸರು

ಚಿನ್ನ ದರೋಡೆ ಪ್ರಕರಣದ ತನಿಖೆ ನಡೆಸುತ್ತಿದ್ದ ಚೆನ್ನೈನ ಪೊಲೀಸ್ ಇನ್ಸ್ ಪೆಕ್ಟರ್ ಪೆರಿಯಪಂಡಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಸ್ಥಾನ ಪೊಲೀಸರು ತಮಿಳುನಾಡು...
ಪೆರಿಯಪಂಡಿ
ಪೆರಿಯಪಂಡಿ
ಚೆನ್ನೈ: ಚಿನ್ನ ದರೋಡೆ ಪ್ರಕರಣದ ತನಿಖೆ ನಡೆಸುತ್ತಿದ್ದ ಚೆನ್ನೈನ ಪೊಲೀಸ್ ಇನ್ಸ್ ಪೆಕ್ಟರ್ ಪೆರಿಯಪಂಡಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಸ್ಥಾನ ಪೊಲೀಸರು ತಮಿಳುನಾಡು ಪೊಲೀಸ್ ಅಧಿಕಾರಿ ಮುನಿಶೇಖರ್ ವಿರುದ್ಧ ದೂರು ದಾಖಲಿಸಿದ್ದಾರೆ. 
ಫೋರೆನ್ಸಿಕ್ ಟೆಸ್ಟ್ ನಲ್ಲಿ ಪೆರಿಯಪಂಡಿ ಅವರ ದೇಹ ಹೊಕ್ಕಿದ್ದ ಗುಂಡು ಅವರ ಪಿಸ್ತೂಲಿನದಲ್ಲ, ಬದಲಿಗೆ ಜತೆಗೆ ಹೋಗಿದ್ದ ಮುನಿಶೇಖರ್ ಪಿಸ್ತೂಲಿನ ಗುಂಡು ಎಂದು ತಿಳಿದುಬಂದಿದ್ದು ಈ ಸಂಬಂಧ ನಿರ್ಲಕ್ಷ್ಯ ಆರೋಪದಡಿ ಪೊಲೀಸ್ ಅಧಿಕಾರಿ ಮುನಿಶೇಖರ್ ವಿರುದ್ಧ ರಾಜಸ್ತಾನ ಪೊಲೀಸರು ದೂರು ದಾಖಲಿಸಿದ್ದಾರೆ. 
ದರೋಡೆಕೋರರನ್ನು ಬಂಧಿಸುವುದಕ್ಕಾಗಿ ಚೆನ್ನೈ ಪೊಲೀಸ್ ಇನ್ಸ್ ಪೆಕ್ಟರ್ ಪೆರಿಯಪಂಡಿ ನೇತೃತ್ವದ ತಂಡ ರಾಜಸ್ತಾನದ ಪಾಲಿ ಜಿಲ್ಲೆಗೆ ತೆರಳಿತ್ತು, ಈ ವೇಳೆ ಶಂಕಿತ ದರೋಡೆಕೋರರ ಬೆನ್ನಟ್ಟಿ ಹೋಗಿದ್ದ ಪೆರಿಯಪಂಡಿ ಅವರನ್ನು ಅವರದ್ದೇ ರಿವಾಲ್ವರ್ ನಿಂದ ಗುಂಡು ಹಾರಿಸಿ ಹತ್ಯೆ ಮಾಡಿದ್ದ ಎಂದು ಹೇಳಲಾಗಿತ್ತು. 
ಚೆನ್ನೈನ ಮದುರಾವೋಯಲ್ ಠಾಣೆಯಲ್ಲಿ ಅವರು ಕರ್ತವ್ಯ ನಿರ್ವಹಿಸುತ್ತಿದ್ದ ಪೆರಿಯಪಂಡಿ ಅವರು, ಕಳೆದ ತಿಂಗಳು ಕೊಲಾಥೂರ್ ಎಂಬಲ್ಲಿ ಸುರಂಗ ತೋಡಿ 3.5 ಕೆಜಿ ಚಿನ್ನ ದೋಚಿದ್ದ ಪ್ರಕರಣದ ತನಿಖೆ ನಡೆಸುತ್ತಿದ್ದರು. ರಾಜಸ್ತಾನದ ಮರುಭೂಮಿಯ ಸಮೀಪ ದರೋಡೆಕೋರರು ಅಡಗಿರುವ ಬಗ್ಗೆ ಮಾಹಿತಿ ಸಿಕ್ಕಿತ್ತು. ಅವರಲ್ಲಿ ಒಬ್ಬನನ್ನು ಇನ್ಸ್ ಪೆಕ್ಟರ್ ಹಿಡಿದಿದ್ದರು. 
ಗುಂಡೇಟಿನಿಂದ ಇನ್ಸ್ ಪೆಕ್ಟರ್ ಸ್ಥಳದಲ್ಲೇ ಮೃತಪಟ್ಟಿದ್ದು, ಜೊತೆಗಿದ್ದ ಪೊಲೀಸರಿಗೆ ಗಾಯಗಳಾಗಿದ್ದು. ನವೆಂಬರ್ 16ರಂದು ಚೆನ್ನೈನ ಆಭರಣ ಮಳಿಗೆಯಲ್ಲಿ ಕಳ್ಳತನ ನಡೆದಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com