ಈ ಹಿಂದೆ ನಡೆದ ಮತದಾನ ವೇಳೆ ಮತಯಂತ್ರಗಳಲ್ಲಿ ದೋಷಕಂಡು ಬಂದು ಮತದಾನ ಅಸ್ಥವ್ಯಸ್ಥವಾಗಿತ್ತು. ಈ ಹಿನ್ನಲೆಯಲ್ಲಿ ನಿನ್ನೆಯಷ್ಟೇ ಚುನಾವಣಾ ಆಯೋಗ ಇಂದು ಮರುಮತದಾನ ಘೋಷಣೆ ಮಾಡಿತ್ತು. ಅದರಂತೆ ಇಂದು 6 ಬೂತ್ ಗಳಲ್ಲಿ ಮರುಮತದಾನ ಆರಂಭಿಸಲಾಗಿದೆ. ಗುಜರಾತ್ ನ ವಿರಂಗಾಮ್, ಸಾವ್ಲಿ ವಿಧಾನಸಭಾ ಕ್ಷೇತ್ರದ ತಲಾ ಎರಡು ಬೂತ್ ಗಳು ಮತ್ತು ವಡ್ಗಾಮ್ ಮತ್ತು ಡಸ್ಕ್ರೋಯ್ ನ ತಲಾ ಒಂದು ಬೂತ್ ಗಳಲ್ಲಿ ಮತದಾನ ಆರಂಭವಾಗಲಿದೆ.