ಓಖಿ ಚಂಡಮಾರುತದ ಪರಿಸ್ಥಿತಿ ಕುರಿತು ಸಿಎಂ ಪಳನಿಸ್ವಾಮಿ ಜತೆ ಪ್ರಧಾನಿ ಮೋದಿ ಚರ್ಚೆ

ಪ್ರಧಾನಿ ನರೇಂದ್ರ ಮೋದಿ ಅವರು ತಮಿಳುನಾಡಿನಲ್ಲಿ ಒಖಿ ಚಂಡಮಾರುತ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದು ಇದೇ ವೇಳೆ ಚಂಡಮಾರುತ ನಂತರದ ಪರಿಸ್ಥಿತಿ...
ನರೇಂದ್ರ ಮೋದಿ
ನರೇಂದ್ರ ಮೋದಿ
ಕನ್ಯಾಕುಮಾರಿ: ಪ್ರಧಾನಿ ನರೇಂದ್ರ ಮೋದಿ ಅವರು ತಮಿಳುನಾಡಿನಲ್ಲಿ ಒಖಿ ಚಂಡಮಾರುತ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದು ಇದೇ ವೇಳೆ ಚಂಡಮಾರುತ ನಂತರದ ಪರಿಸ್ಥಿತಿ ಕುರಿತು ತಮಿಳುನಾಡು ಮುಖ್ಯಮಂತ್ರಿ ಪಳನಿಸ್ವಾಮಿ ಜತೆ ಚರ್ಚೆ ನಡೆಸಿದರು. 
ಇದೇ ವೇಳೆ ತಮಿಳುನಾಡು ಸರ್ಕಾರ ಈಶಾನ್ಯ ಮಾನ್ಸೂನ್ ನಿಂದ ಹಾನಿಗೊಳಗಾಗಿರುವ ಜಿಲ್ಲೆಗಳಿಗೆ ಪರಿಹಾರವಾಗಿ 4,047 ಕೋಟಿ ರುಪಾಯಿ ಸೇರಿದಂತೆ ಹಾಗೂ ಒಖಿ ಚಂಡಮಾರುತದಿಂದ ಉಂಟಾಗಿರುವ ಹಾನಿಗೆ 9,300 ಕೋಟಿ ರುಪಾಯಿ ಪರಿಹಾರ ನೀಡುವಂತೆ ಪ್ರಧಾನಿಗೆ ಸಿಎಂ ಪಳನಿಸ್ವಾಮಿ ಮನವಿ ಮಾಡಿದರು. 
ಸರ್ಕಾರಿ ಗೆಸ್ಟ್ ಹೌಸ್ ನಲ್ಲಿ ಸಿಎಂ ಪಳನಿಸ್ವಾಮಿ, ಓ ಪನ್ನೀರ್ ಸೆಲ್ವಂ ಸೇರಿದಂತೆ ಕನ್ಯಾಕುಮಾರಿಯ ಕರಾವಳಿ ತೀರದಲ್ಲಿನ 8 ಗ್ರಾಮಗಳ ಸುಮಾರು 25ಕ್ಕೂ ಹೆಚ್ಚು ಮೀನುಗಾರರು ಸಭೆಯಲ್ಲಿ ಭಾಗಿಯಾಗಿ ತಮ್ಮ ಕಷ್ಟಗಳನ್ನು ಪ್ರಧಾನಿ ಮುಂದೆ ಹೇಳಿಕೊಂಡರು. 
ಇದಕ್ಕೂ ಮುನ್ನ ಲಕ್ಷದ್ವೀಪಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿ ಅಲ್ಲಿ ಚಂಡಮಾರುತದಿಂದ ಆಗಿರುವ ಹಾನಿಯ ಕುರಿತು ಉನ್ನತಾಧಿಕಾರಿಗಳ ಜತೆ ಸಭೆ ನಡೆಸಿ, ಮಾಹಿತಿ ಪಡೆದರು. ಚಂಡಮಾರುತದಿಂದ ನಿರಾಶ್ರಿತರಾದ ಕುಟುಂಬಗಳ ಸದಸ್ಯರನ್ನು ಭೇಟಿ ಮಾಡಿ ವಿಶ್ವಾಸ ತುಂಬಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com