ವಿವಿಐಪಿ ಕಾಪ್ಟರ್ ಖರೀದಿ ಹಗರಣ: ಮಾಜಿ ಏರ್ ಮಾರ್ಷಲ್ ಜಸ್ಪಾಲ್ ಸಿಂಗ್ ಗುಜ್ರಾಲ್ ಗೆ ಷರತ್ತುಬದ್ಧ ಜಾಮೀನು

ಬಹುಕೋಟಿ ವಿವಿಐಪಿ ಕಾಪ್ಟರ್ ಖರೀದಿ ಹಗರಣಕ್ಕೆ ಸಂಬಂಧಿಸಿದಂತೆ ಬುಧವಾರ ಪಾಟಿಯಾಲಾ ಹೌಸ್ ಕೋರ್ಟ್ ಮಾಜಿ ಏರ್ ಮಾರ್ಷಲ್ ಜಸ್ಪಾಲ್ ಸಿಂಗ್ ಗುಜ್ರಾಲ್ ಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಬಹುಕೋಟಿ ವಿವಿಐಪಿ ಕಾಪ್ಟರ್ ಖರೀದಿ ಹಗರಣಕ್ಕೆ ಸಂಬಂಧಿಸಿದಂತೆ ಬುಧವಾರ ಪಾಟಿಯಾಲಾ ಹೌಸ್ ಕೋರ್ಟ್ ಮಾಜಿ ಏರ್ ಮಾರ್ಷಲ್ ಜಸ್ಪಾಲ್ ಸಿಂಗ್ ಗುಜ್ರಾಲ್ ಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ಜಸ್ಪಾಲ್ ಸಿಂಗ್ ಗುಜ್ರಾಲ್ ಅವರಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿರುವ ಕೋರ್ಟ್ ವೈಯುಕ್ತಿಕ ಲಕ್ಷ ರುಗಳ ಬಾಂಡ್ ನೀಡಿ ಜಾಮೀನು ಪಡೆಯುವಂತೆ ಸೂಚನೆ ನೀಡಿದೆ. ಈ ಹಿಂದೆ ಮುಂದಿನ ವಿಚಾರಣೆ ವೇಳೆ ಸಿಬಿಐ  ಅಧಿಕಾರಿಗಳು ಪ್ರಕರಣ ಸಂಬಂಧ ಇ-ಚಾರ್ಜ್ ಶೀಟ್ ಸಲ್ಲಿಕೆ ಮಾಡುವಂತೆಯೂ ಕೋರ್ಟ್ ಅಧಿಕಾರಿಗಳಿಗೆ ಸೂಚನೆ ನೀಡಿದೆ. ಅಂತೆಯೇ ಮುಂದಿನ ವಿಚಾರಣೆಯನ್ನು ಮೇ 30ಕ್ಕೆ ಮುಂದೂಡಿದೆ. ಆದರೆ ಗುಜ್ರಾಲ್ ಜಾಮೀನು  ಮಂಜೂರು ಮಾಡಿರುವ ನ್ಯಾಯಾಲಯದ ನಿರ್ಧಾರವನ್ನು ಸಿಬಿಐ ಪ್ರಶ್ನಿಸಿದೆ. ಅಲ್ಲದೆ ಜಾಮೀನು ರದ್ದು ಕೋರಿ ಮೇಲಿನ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸುವ ಕುರಿತು ಚಿಂತನೆಯಲ್ಲಿ ತೊಡಗಿದೆ ಎಂದು ಹೇಳಲಾಗುತ್ತಿದೆ.
ಇನ್ನು ಇಂದಿನ ವಿಚಾರಣೆಯಲ್ಲಿ ಹಗರಣದ ಪ್ರಮುಖ ಆರೋಪಿ ಮಾಜಿ ಏರ್ ಚೀಫ್ ಮಾರ್ಷಲ್ ಎಸ್ ಪಿ ತ್ಯಾಗಿ ಕೂಡ ಹಾಜರಾಗಿದ್ದರು. ಪ್ರಕರಣ ಸಂಬಂಧ ಈ ವರೆಗೂ ಸಿಬಿಐ ಅಧಿಕಾರಿಗಳು 12 ಮಂದಿ ಆರೋಪಿಗಳ ಹೆಸರನ್ನು  ಚಾರ್ಜ್ ಶೀಟ್ ನಲ್ಲಿ ಸೇರಿಸಿತ್ತು. ಅಂತೆಯೇ ಹಗರಣದಲ್ಲಿ ಫಿನ್ಮೆಕ್ಕಾನಿಕ, ಅಗಸ್ಟಾ ವೆಸ್ಟ್ ಲ್ಯಾಂಡ್, ಮೊಹಾಲಿ ಮೂಲದ ಐಡಿಎಸ್ ಇನ್ಫೋಟೆಕ್, ಚಂಡೀಗಢ ಮೂಲದ ಏರೋಮ್ಯಾಟ್ರಿಕ್ಸ್, ಐಡಿಎಸ್ ಟುನಿಷಿಯಾ ಮತ್ತು ಐಡಿಎಸ್  ಮಾರಿಷಸ್ ಸಂಸ್ಥೆಗಳ ಹೆಸರು ಕೂಡ ಕೇಳಿಬಂದಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com