ಮನಮೋಹನ್ ಸಿಂಗ್ ವಿರುದ್ಧ ಪ್ರಧಾನಿ ಮೋದಿ ಹೇಳಿಕೆಗೆ ರಾಜ್ಯಸಭೆ ಕಲಾಪ ಬಲಿ

ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರು ಪಾಕಿಸ್ತಾನದ ಜೊತೆ ಸೇರಿಕೊಂಡು ಪಿತೂರಿ...
ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದ ವಿರೋಧ ಪಕ್ಷಗಳ ಸದಸ್ಯರು
ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದ ವಿರೋಧ ಪಕ್ಷಗಳ ಸದಸ್ಯರು
ನವದೆಹಲಿ: ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರು ಪಾಕಿಸ್ತಾನದ ಜೊತೆ ಸೇರಿಕೊಂಡು ಪಿತೂರಿ ನಡೆಸಿದ್ದಾರೆ ಎಂಬ ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆ ಇಂದು ರಾಜ್ಯಸಭಾ ಕಲಾಪವನ್ನು ಸಂಪೂರ್ಣವಾಗಿ ನುಂಗಿಹಾಕಿತು. 
ರಾಜ್ಯಸಭಾಧ್ಯಕ್ಷ ಎಂ.ವೆಂಕಯ್ಯ ನಾಯ್ಡು, ಪ್ರಧಾನಿಯವರು ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರೂ ಕೂಡ ಪ್ರತಿಪಕ್ಷಗಳ ತೀವ್ರ ಗದ್ದಲ, ಕೋಲಾಹಲಗಳಿಂದಾಗಿ ಕಲಾಪ ಸುಗಮವಾಗಿ ನಡೆಯಲೇ ಇಲ್ಲ. ಕಾಂಗ್ರೆಸ್ ಸದಸ್ಯರ ತೀವ್ರ ಪ್ರತಿಭಟನೆ ಮತ್ತು ಪ್ರಧಾನಿ ಕ್ಷಮೆ ಕೇಳಬೇಕೆಂದು ಬೇರೆ ವಿರೋಧ ಪಕ್ಷಗಳ ಒತ್ತಾಯ ಇಂದು ಬೆಳಗ್ಗೆ ಕಲಾಪ ಆರಂಭವಾದಾಗಿನಿಂದ ಕೇಳಿಬರುತ್ತಲೇ ಇದ್ದವು.
ಇಂದು ಮಧ್ಯಾಹ್ನ ಭೋಜನಕ್ಕೆ ಮುನ್ನ ರಾಜ್ಯಸಭೆ ಕಲಾಪವನ್ನು ಎರಡು ಬಾರಿ ಮುಂದೂಡಲಾಯಿತು. ನಂತರ ಅಪರಾಹ್ನ 2 ಗಂಟೆಗೆ ಕಲಾಪ ಮತ್ತೆ ಆರಂಭವಾದಾಗ ಅದೇ ಗದ್ದಲ, ಕೋಲಾಹಲ ಮುಂದುವರಿದವು. ಇದರಿಂದಾಗಿ ರಾಜ್ಯಸಭಾಧ್ಯಕ್ಷರು ಕಲಾಪವನ್ನು ನಾಳೆಗೆ ಮುಂದೂಡಿದರು. 
ಇತ್ತ ಕೆಳಮನೆಯಾದ ಲೋಕಸಭೆಯಲ್ಲಿ ಕೂಡ ಪ್ರಧಾನಿಯವರ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಯಿತು. ಅಪರಾಹ್ನ ಕಾಂಗ್ರೆಸ್ ಸದಸ್ಯರು ಕಲಾಪವನ್ನು ಬಹಿಷ್ಕರಿಸಿ ಸದನದಿಂದ ಹೊರನಡೆದರು.
ಇಂದು ಬೆಳಗ್ಗೆ ರಾಜ್ಯಸಭೆಯಲ್ಲಿ ಕಲಾಪ ಆರಂಭವಾಗುತ್ತಿದ್ದಂತೆ ಕಾಂಗ್ರೆಸ್ ಸದಸ್ಯರು ಪ್ರಧಾನಿ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಕೋಲಾಹಲವೆಬ್ಬಿಸಿದರು. ಘೋಷಣೆಗಳನ್ನು ಕೂಗುತ್ತಾ ಸದನದ ಬಾವಿಗಿಳಿದರು. ಆಗ ವೆಂಕಯ್ಯ ನಾಯ್ಡು ಶೂನ್ಯ ವೇಳೆಯ ಕಲಾಪವನ್ನು ಮಧ್ಯಾಹ್ನಕ್ಕೆ ಮತ್ತು ಪ್ರಶ್ನೋತ್ತರ ಕಲಾಪವನ್ನು  ಅಪರಾಹ್ನಕ್ಕೆ ಮುಂದೂಡಿದರು. 
ಸದನದ ಒಳಗೆ ಹೇಳಿಲ್ಲದ ಕಾರಣ ಪ್ರಧಾನಿಯವರು ಇಲ್ಲಿ ಕ್ಷಮೆ ಕೇಳುವ ಅಗತ್ಯವಿಲ್ಲ ಎಂದು ಸಭಾಧ್ಯಕ್ಷ ವೆಂಕಯ್ಯ ನಾಯ್ಡು ಹೇಳಿದರು. ಯಾರು ಕೂಡ ಕ್ಷಮೆ ಕೇಳುವುದಿಲ್ಲ. ಸದನದಲ್ಲಿ ಏನೂ ನಡೆದಿಲ್ಲ. ಯಾವುದೇ ಹೇಳಿಕೆಯನ್ನು ಸದನದಲ್ಲಿ ನೀಡಿಲ್ಲ. ಪ್ರಶ್ನೋತ್ತರ ಅವಧಿಯನ್ನುರದ್ದು ಮಾಡುವ ಪದ್ಧತಿಯಿಲ್ಲ. ಸದನವನ್ನು ಅಣಕಿಸಬೇಡಿ. ಈಗಾಗಲೇ ತಪ್ಪು ಸಂದೇಶ ರವಾನೆಯಾಗುತ್ತಿದೆ ಎಂದು ಮೊದಲ ಬಾರಿಗೆ ಸದನ ಮುಂದೂಡಲ್ಪಟ್ಟು ಮತ್ತೆ ಅಪರಾಹ್ನ ಸೇರಿದಾಗ ವೆಂಕಯ್ಯ ನಾಯ್ಡು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com