ಅನುಮತಿ ಇಲ್ಲದೇ ರೋಡ್ ಶೋ: ಹಾರ್ದಿಕ್ ಪಟೇಲ್ ವಿರುದ್ಧ 2 ಎಫ್ ಐಆರ್

ಗುಜರಾತ್ ಚುನಾವಣಾ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಅಹ್ಮದಾಬಾದ್ ಪೊಲೀಸರು ಪಟೇಲ್ ಸಮುದಾಯದ ಹೋರಾಟಗಾರ ಹಾರ್ದಿಕ್ ಪಟೇಲ್ ಗೆ ಶಾಕ್ ನೀಡಿದ್ದು, 2 ಪ್ರತ್ಯೇಕ ಎಫ್ ಐಆರ್ ದಾಖಲಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಅಹ್ಮದಾಬಾದ್: ಗುಜರಾತ್ ಚುನಾವಣಾ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಅಹ್ಮದಾಬಾದ್ ಪೊಲೀಸರು ಪಟೇಲ್ ಸಮುದಾಯದ ಹೋರಾಟಗಾರ ಹಾರ್ದಿಕ್ ಪಟೇಲ್ ಗೆ ಶಾಕ್ ನೀಡಿದ್ದು, 2 ಪ್ರತ್ಯೇಕ ಎಫ್ ಐಆರ್  ದಾಖಲಿಸಿದ್ದಾರೆ.
ಈ ಹಿಂದೆ ಗುಜರಾತ್ ಚುನಾವಣಾ ಸಂದರ್ಭದಲ್ಲಿ ಹಾರ್ದಿಕ್ ಪಟೇಲ್ ಮತ್ತು ಅವರ ಬೆಂಬಲಿಗರು ಅನುಮತಿ ಇಲ್ಲದೇ ರೋಡ್ ಶೋ ನಡೆಸಿದ ಸಂಬಂಧ ಅಹ್ಮದಾಬಾದ್ ಪೊಲೀಸರು ಎಫ್ ಐಆರ್ ದಾಖಲಿಸಿದ್ದಾರೆ ಎಂದು  ತಿಳಿದುಬಂದಿದೆ. ಈ ಹಿಂದೆ ಡಿಸೆಂಬರ್ 11ರಂದು ಹಾರ್ದಿಕ್ ಪಟೇಲ್ ಅಹ್ಮದಾಬಾದ್ ಹೊರವಲಯದಲ್ಲ ಭೋಪಾಲ್ ಪ್ರದೇಶದಲ್ಲಿ ರೋಡ್ ಶೋ ನಡೆಸಿದ್ದರು. ಆದರೆ ಈ ರೋಡ್ ಶೋಗೆ ಪೊಲೀಸರಿಂದ ಅನುಮತಿ ಪಡೆದಿರಲಿಲ್ಲ  ಎಂದು ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.
ಹಾರ್ದಿಕ್ ಮತ್ತು ಅವರ 50 ಮಂದಿ ಬೆಂಬಲಿಗರ ವಿರುದ್ಧ ಪೊಲೀಸರು ಐಪಿಸಿ ಸೆಕ್ಷನ್ 188ರ ಅಡಿಯಲ್ಲಿ ಪೊಲೀಸರ ಆದೇಶ ತಿರಸ್ಕರಿಸಿ ರೋಡ್ ಶೋ ನಡೆಸಿದ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ಪೊಲೀಸ್ ಆಯುಕ್ತ  ಗೋಲ್ಹಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com