ನವದೆಹಲಿ: ದೆಹಲಿಯ ರೋಹಿಣಿ ಆದ್ಯಾತ್ಮಿಕ ವಿಶ್ವ ವಿದ್ಯಾನಿಲಯದಲ್ಲಿ ಅಕ್ರಮವಾಗಿ ಬಂಧಿಗಳಾಗಿದ್ದ 40ಕ್ಕೂ ಹೆಚ್ಚು ಯುವತಿಯರನ್ನು ಪೋಲೀಸರು ರಕ್ಷಿಸಿದ್ದಾರೆ.
ಡೆಲ್ಲಿ ಕಮಿಷನ್ ಆಫ್ ಉಮನ್ (ಡಿಸಿಡಬ್ಲ್ಯೂ) ಸಂಘಟನೆ ಹಾಗೂ ಪೋಲೀಸರು ನಿನ್ನೆ ಆಶ್ರಮದ ಮೇಲೆ ದಾಳಿ ನಡೆಸಿದಾಗ ಯುವತಿಯರು ಅಕ್ರಮ ಗೃಹಬಂಧನದಲ್ಲಿರುವುದು ತಿಳಿದು ಬಂದಿದೆ. ಈ ಸಂಬಂಧ ಆಶ್ರಮದ ಮುಖ್ಯಸ್ಥ ಬಾಬಾ ವೀರೇಂದ್ರ ದೇವ್ ದೀಕ್ಷಿತ್ ಅವರನ್ನು ಬಂಧಿಸುಂತೆ ಡಿಸಿಡಬ್ಲ್ಯು ಆಗ್ರಹಿಸಿದೆ.
"13 ವರ್ಷದ ಬಾಲಕಿಯೊಬ್ಬಳು ತನ್ನ ಮೇಲೆ ಬಾಬಾ ಅತ್ಯಾಚಾರ ಎಸಗಿದ್ದಾರೆ ಎಂದು ಹೇಳಿದ್ದು ಅಂತಹ ಬಾಬಾರವರ ವಿರುದ್ಧ ಕ್ರಮ ತೆಗೆದುಕೊಳ್ಳಲು ಇದು ಸಕಾಲ." ಎಂದು ಡಿಸಿಡಬ್ಲ್ಯು ಮುಖ್ಯಸ್ಥೆ ಸ್ವಾತಿ ಹೇಳಿದ್ದಾರೆ.
More than 40 girls who kept under illegal confinement rescued from an ashram in Delhi's Rohini yesterday evening. DCW chief Swati Maliwal said 'the accused Baba Virendra Dev Diskhit should be arrested immediately' pic.twitter.com/XXdO7k6z8R