ಪ್ರಧಾನಿ ಮೋದಿ, ರಾಹುಲ್ ಗುಜರಾತ್ ದೇಗುಲ ಭೇಟಿ ಅಪ್ಪಟ ವೋಟ್' ಬ್ಯಾಂಕ್ ರಾಜಕೀಯ: ಓವೈಸಿ
ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಗುಜರಾತ್ ರಾಜ್ಯದ ದೇಗುಲಕ್ಕೆ ಭೇಟಿ ನೀಡುತ್ತಿರುವುದು ಅಪ್ಪಟ ವೋಟ್'ಬ್ಯಾಂಕ್ ರಾಜಕೀಯ ಎಂದು ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿಯವರು...
ಹೈದರಾಬಾದ್: ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಗುಜರಾತ್ ರಾಜ್ಯದ ದೇಗುಲಕ್ಕೆ ಭೇಟಿ ನೀಡುತ್ತಿರುವುದು ಅಪ್ಪಟ ವೋಟ್'ಬ್ಯಾಂಕ್ ರಾಜಕೀಯ ಎಂದು ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿಯವರು ಶನಿವಾರ ಹೇಳಿದ್ದಾರೆ.
ಹೈದರಾಬಾದ್ ನಲ್ಲಿ ಬೆಂಬಲಿಗರನ್ನುದ್ದೇಶಿಸಿ ಮಾತನಾಡಿರುವ ಅವರು, ಕಾಂಗ್ರೆಸ್ ನಾಯಕರು ಮತ್ತುಬಿಜೆಪಿ ನಾಯಕರನ್ನು ನೋಡಿದರೆ ಅವರು ಚುನಾವಣಾ ಪ್ರಚಾರವನ್ನು ಮಾಡುತ್ತಿರುವುದಂತೆ ಕಾಣುತ್ತಿಲ್ಲ. ತಮ್ಮಿಂದ ಸಾಧ್ಯವಾದಷ್ಟು ದೇಗುಲಗಳಿಗೆ ಭೇಟಿ ನೀಡುತ್ತಿರುವಂತೆ ಕಾಣಿಸುತ್ತಿದೆ. ವಿಧಾನಸಭೆ ಹಾಗೂ ಸಂಸತ್ತು ಚುನಾವಣೆಗಳು ಆರಂಭಗೊಂಡಾಗ ಯಾತ್ರೆ ಹೇಗಿರುತ್ತದೆ ಎಂಬುದನ್ನು ತೋರಿಸುತ್ತೇನೆಂದು ಹೇಳಿದ್ದಾರೆ.
ಚುನಾವಣಾ ಪ್ರಚಾರ ಸಂದರ್ಭದಲ್ಲಿ ನಾನೂ ಕೂಡ ಮಸೀದಿ ಹಾಗೂ ದರ್ಗಾಗಳಿಗೆ ಭೇಟಿ ನೀಡುತ್ತೇನೆ. ಹಸಿರು ಧ್ವಜವನ್ನು ಹಿಡಿಯುತ್ತೇನೆ. ಬಿಜೆಪಿ ನಾಯಕರು ಕೇಸರಿ ಧರಿಸಿದ್ದಾರೋ, ಇಲ್ಲವೋ ಎಂಬುದರ ಬಗ್ಗೆ ನಾವು ಆಲೋಚಿಸುತ್ತಿಲ್ಲ. ಆದರೆ, ನಾವು ಪ್ರಚಾರ ಸಂದರ್ಭದಲ್ಲಿ ಹಸಿರನ್ನು ತೊಡುತ್ತೇವೆಂದು ತಿಳಿಸಿದ್ದಾರೆ.
ಇದೇ ವೇಳೆ ಪ್ರಧಾನಿ ಮೋದಿಯವರು ಸಬರ್ಮತಿ ನದಿ ಬಳಿ ನಡೆಸಿದ ಸೀ ಪ್ಲೇನ್ ಹಾರಾಟ ಕುರಿತಂತೆ ಓವೈಸಿ ಕಿಡಿಕಾರಿದ್ದಾರೆ.