ಇಸ್ಲಾಮಾಬಾದ್ ಗೆ ಆಗಮಿಸಿದ ಕುಲಭೂಷಣ್ ಜಾದರ್ ಕುಟುಂಬ
ಇಸ್ಲಾಮಾಬಾದ್ ಗೆ ಆಗಮಿಸಿದ ಕುಲಭೂಷಣ್ ಜಾದರ್ ಕುಟುಂಬ

ಕುಲಭೂಷಣ್ ಜಾದವ್ ಭೇಟಿಗಾಗಿ ಇಸ್ಲಾಮಾಬಾದ್ ತಲುಪಿದ ತಾಯಿ, ಪತ್ನಿ

ಬೇಹುಗಾರಿಕೆ ಆರೋಪದಡಿಯಲ್ಲಿ ಪಾಕಿಸ್ತಾನದಲ್ಲಿ ಬಂಧನಕ್ಕೀಡಾಗಿರುವ ಭಾರತದ ಕುಲಭೂಷಣ್ ಜಾದವ್ ರನ್ನು ಭೇಟಿ ಮಾಡಲು ಆತನ ತಾಯಿ ಮತ್ತು ಪತ್ನಿ ಇಸ್ಲಾಮಾಬಾದ್ ತೆರಳಿದ್ದು, ಕೆಲವೇ ಕ್ಷಣಗಳಲ್ಲಿ ಕುಲಭೂಷಣ್ ಜಾದವ್ ರನ್ನು ಭೇಟಿ ಮಾಡಲಿದ್ದಾರೆ.
ಇಸ್ಲಾಮಾಬಾದ್: ಬೇಹುಗಾರಿಕೆ ಆರೋಪದಡಿಯಲ್ಲಿ ಪಾಕಿಸ್ತಾನದಲ್ಲಿ ಬಂಧನಕ್ಕೀಡಾಗಿರುವ ಭಾರತದ ಕುಲಭೂಷಣ್ ಜಾದವ್ ರನ್ನು ಭೇಟಿ ಮಾಡಲು ಆತನ ತಾಯಿ ಮತ್ತು ಪತ್ನಿ ಇಸ್ಲಾಮಾಬಾದ್ ತೆರಳಿದ್ದು, ಕೆಲವೇ ಕ್ಷಣಗಳಲ್ಲಿ  ಕುಲಭೂಷಣ್ ಜಾದವ್ ರನ್ನು ಭೇಟಿ ಮಾಡಲಿದ್ದಾರೆ.
ಪ್ರಸ್ತುತ ಕುಲಭೂಷಣ್ ಜಾದವ್ ತಾಯಿ ಮತ್ತು ಅವರ ಪತ್ನಿ ಇಸ್ಲಾಮಾಬಾದ್ ನಲ್ಲಿರುವ ಭಾರತೀಯ ರಾಯಭಾರ ಕಚೇರಿ ತಲುಪಿದ್ದು, ಅಲ್ಲಿ ಅವರಿಗೆ ಭಾರತೀಯ ರಾಯಭಾರ ಕಚೇರಿಯ ಡೆಪ್ಯೂಟಿ ಕಮಿಷನರ್ ಜೆಪಿ ಸಿಂಗ್ ಅವರು  ಸಾಥ್ ನೀಡಿದ್ದಾರೆ. ಅಂತೆಯೇ ಕುಲಭೂಷಣ್ ಜಾದವ್ ತಾಯಿ ಮತ್ತು ಪತ್ನಿ ಪಾಕಿಸ್ತಾನ ವಿದೇಶಾಂಗ ಕಚೇರಿಗೆ ಆಗಮಿಸಿ ಅಲ್ಲಿ ಕುಲಭೂಷಣ್ ಜಾದವ್ ರನ್ನು ಭೇಟಿ ಮಾಡಲಿದ್ದಾರೆ. ಈ ವೇಳೆ ಅವರೊಂದಿಗೆ ಪಾಕಿಸ್ತಾನ ವಿದೇಶಾಂಗ  ಸಚಿವ ಖ್ವಾಜಾ ಮಹಮದ್ ಆಸಿಫ್ ಅವರು ಜೊತೆಗಿರಲಿದ್ದಾರೆ ಎಂದು ತಿಳಿದುಬಂದಿದೆ.
ಇನ್ನು ಭೇಟಿ ವೇಳೆ ಕುಲಭೂಷಣ್ ಜಾಜವ್ ಪತ್ನಿ ಮತ್ತು ತಾಯಿಯೊಂದಿಗೆ ಭಾರತೀಯ ರಾಯಭಾರ ಕಚೇರಿಯ ಅಧಿಕಾರಿಗಳು ಉಪಸ್ಥಿತರಿರಬಹುದೇ ಎಂಬುದರ ಕುರಿತು ಪಾಕಿಸ್ತಾನ ಸರ್ಕಾರ ಇನ್ನೂ ನಿರ್ಧಾರ ತಳೆದಿಲ್ಲ. ಹೀಗಾಗಿ  ಭೇಟಿ ವೇಳೆ ರಾಯಭಾರ ಕಚೇರಿ ಅಧಿಕಾರಿಗಳ ಉಪಸ್ಥಿತಿ ಕುರಿತು ಗೊಂದಲ ಮುಂದವರೆದಿದೆ. 
ಪಾಕ್ ವಿದೇಶಾಂಗ ಕಚೇರಿ ಸುತ್ತಮುತ್ತ ಭಾರಿ ಭದ್ರತೆ
ಪ್ರಸ್ತುತ ಕುಲಭೂಷಣ್ ಜಾದವ್ ರನ್ನು ಅವರ ಪತ್ನಿ ಮತ್ತು ತಾಯಿ ಭೇಟಿ ಮಾಡುತ್ತಿದ್ದು, ಇದಕ್ಕಾಗಿ ಪಾಕಿಸ್ತಾನ ವಿದೇಶಾಂಗ ಸಚಿವಾಲಯದಲ್ಲಿ ಸಕಲ ಸಿದ್ಧತೆಗಳನ್ನೂ ಮಾಡಲಾಗಿದೆ. ಕಚೇರಿ ಸುತ್ತಮುತ್ತ ಭಾರಿ ಭದ್ರತೆ  ಏರ್ಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com