ಯುಪಿಎ ಅಧ್ಯಕ್ಷರಾಗಿ ಸೋನಿಯಾ ಮುಂದುವರಿಕೆ: ಇನ್ನೂ ಅಂತಿಮ ನಿರ್ಧಾರವಿಲ್ಲ ಎಂದ ಮೊಯ್ಲಿ

"ಸೋನಿಯಾ ಗಾಂಧಿಯವರು ಯುಪಿಎ ಅಧ್ಯಕ್ಷ ಸ್ಥಾನದಲ್ಲೇ ಮುಂದುವಉವರಿಯಲಿದ್ದಾರೆಯೆ ಅಥವಾ ಪಕ್ಷದ ನೂತನ ಅಧ್ಯಕ್ಷರಾದ ರಾಹುಲ್ ಗಾಂಧಿ.........
ಎಂ ವೀರಪ್ಪ ಮೊಯಿಲಿ
ಎಂ ವೀರಪ್ಪ ಮೊಯಿಲಿ
ನವದೆಹಲಿ: "ಸೋನಿಯಾ ಗಾಂಧಿಯವರು ಯುಪಿಎ ಅಧ್ಯಕ್ಷ ಸ್ಥಾನದಲ್ಲೇ ಮುಂದುವಉವರಿಯಲಿದ್ದಾರೆಯೆ ಅಥವಾ ಪಕ್ಷದ ನೂತನ ಅಧ್ಯಕ್ಷರಾದ ರಾಹುಲ್ ಗಾಂಧಿ ಆ ಸ್ಥಾನಕ್ಕೆ ನೇಮಕವಾಗುವರೆ ಎನ್ನುವುದನ್ನು ಇನ್ನೂ ನಿರ್ಧರಿಸಿಲ್ಲ" ಎಂದು ಕಾಂಗ್ರೆಸ್ ನ ಹಿರಿಯ ಮುಖಂಡ ವೀರಪ್ಪ ಮೊಯ್ಲಿ ಹೇಳಿದ್ದಾರೆ.
"ಪಕ್ಷದ ನಾಯಕರಾದ ರಾಹುಲ್ ಗಾಂಧಿ ಯುಪಿಎ ನೇತೃತ್ವ ವಹಿಸಿಕೊಳ್ಳಲು ಸಮರ್ಥರಿದ್ದಾರೆ. ಆದರೆ ಇದರ ಬಗೆಗೆ ಅಂತಿಮ ನಿರ್ಧಾರ ಅವರಿಗೆ (ರಾಹುಲ್ ಹಾಗೂ ಸೋನಿಯಾಗಾಂಧಿ) ಬಿಟ್ಟಿದೆ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ 19 ವರ್ಷದ ಅಧಿಕಾರಾವಧಿಯಲ್ಲಿ ಸೋನಿಯಾ ಗಾಂಧಿ ಪಕ್ಷವನ್ನು ಅತ್ಯಂತ ಉತ್ತಮ ರೀತಿಯಲ್ಲಿ ಕಟ್ಟಿ ಬೆಳೆಸಿದ್ದಾರೆ. ಇನ್ನು ಮುಂದೆ ರಾಹುಲ್ ಪಕ್ಷವನ್ನು ಮುನ್ನೆಡೆಸುವಾಗಲೂ ಸೋನಿಯಾ ಅವರ ಬೆಂಬಲ, ಸಹಕಾರವಿರಲಿದೆ" ಮೊಯ್ಲಿ ಹೇಳಿದರು.
ಪಶ್ಚಿಮ ಬಂಗಾಳದ ಟಿಎಂಸಿ ಅಧಿನಾಯಕಿ ಮಮತಾ ಬ್ಯಾನರ್ಜಿ ಮುಂಬರುವ ಮಹಾಚುನಾವಣೆಯಲ್ಲಿ ಬಿಜೆಪಿ ಪರವಾಗಿರಲಿದ್ದಾರೆ ಎಂದು ಅವರ ಪಕ್ಷದ ನಾಯಕರ ಹೇಳಿಕೆ ಹಿಂದಿನ ಉದ್ದೇಶದ ಮೌಲ್ಯಮಾಪನದ ಅಗತ್ಯವಿಲ್ಲ ಎಂದು ಕರ್ನಾಟಕದ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಪಿಟಿಐ ಗೆ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com