ನವದೆಹಲಿ: ದೆಹಲಿ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಹಾಗೂ ದೆಹಲಿ ಎಎಪಿ ಸರ್ಕಾರದ ನಡುವೆ ಮತ್ತೆ ಜಟಾಪಟಿ ಪ್ರಾರಂಬವಾಗಿದೆ. ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ "ದೆಹಲಿಯಲ್ಲಿ ಯಾರ ನಿರ್ಧಾರ ಅಂತಿಮ? ಎಂದು ಪ್ರಶ್ನಿಸಿದ್ದಾರೆ.
"ಲೆಫ್ಟಿನೆಂಟ್ ಗವರ್ನರ್ ಡಿಜಿಟಲೈಸೇಷನ್ ಸಾಕಷ್ಟು ಬೆಳವಣಿಗೆ ಕಂಡಿದೆ ಎಂದು ಹೇಳುತ್ತಾರೆ. ಆದರೆ ದೆಹಲಿ ಸರ್ಕಾರವು ಡಿಜಿಟಲೈಸೇಷನ್ ಇನ್ನೂ ಮನೆ ಮನೆಗೆ ತಲುಪಬೇಕು ಎನ್ನುತ್ತಿದೆ. ಇಲ್ಲಿ ಪ್ರಶ್ನೆ ಎಂದರೆ ಇಲ್ಲಿ ಅಂತಿಮ ನಿರ್ಧಾರ ಯಾರದ್ದು? ಲೆಫ್ಟಿನೆಂಟ್ ಗವರ್ನರ್? ಚುನಾಯಿತ ಸರ್ಕಾರವೆ?" ಕೇಜ್ರಿವಾಲ್ ಇಂದು ತಮ್ಮ ಟ್ವೀಟ್ ನಲ್ಲಿ ಹೇಳಿದ್ದಾರೆ.
"ಪ್ರಸ್ತುತ ಪ್ರಸ್ತಾಪವನ್ನು ಮರುಪರಿಶೀಲಿಸುವಂತೆ ನಾವು ಸಲಹೆ ನಿಡುತ್ತೇವೆ. ಭ್ರಷ್ಟಾಚಾರವನ್ನು ಕೊನೆಗೊಳಿಸಲು ಮತ್ತು ಸಾರ್ವಜನಿಕ ಸೇವೆ ಸುಧಾರಣೆಗಾಘಿ ಪರ್ಯಾಯ ಮಾದರಿಯನ್ನು ಹುಡುಕಿ" ಎಂದು ಲೆ. ಗವರ್ನರ್ ಹೇಳಿದ್ದಾರೆ.
"ಉತ್ತಮ ಮತ್ತು ಭ್ರಷ್ಟಾಚಾರ ಮುಕ್ತ ಆಡಳಿತವನ್ನು ಒದಗಿಸಲು ದೆಹಲಿಯ ಸರ್ಕಾರದ ಪ್ರಯತ್ನಗಳಲ್ಲಿ ಭಾರಿ ಹಿನ್ನೆಡೆ ಅನುಭವಿಸಿದೆ ಎನ್ನುವ ಗವರ್ನರ್ ನಿಜ ಪರಿಸ್ಥಿತಿಯ ಅರಿವಿಲ್ಲದೆ ಹೇಳಿಕೆ ನೀಡಿದ್ದಾರೆ." ಎಂದು ಮಂಗಳವಾರ, ದೆಹಲಿಯ ಉಪಮುಖ್ಯಮಂತ್ರಿ ಸಿಸೋಡಿಯಾ ಸಹ ಗವರ್ನರ್ ಹೇಳಿಕೆಯನ್ನು ಖಂಡಿಸಿದ್ದಾರೆ.
ನೀರಿನ ಸಂಪರ್ಕದಿಂದ ವಿವಾಹ ನೊಂದಣಿವರೆಗೆ ಒಟ್ಟು ನಲವತ್ತು ಸೇವೆಗಳನ್ನು ಡಿಜಿಟಲೀಕರಣ ಯೋಜನೆಯಲ್ಲಿ ತರಲು ದೆಹಲಿ ಸರ್ಕಾರವು ತೀರ್ಮಾನಿಸ್ದೆ.