ಜಾಧವ್ ಕುಟುಂಬಸ್ಥರೊಂದಿಗೆ ಅಮಾನವೀಯ ವರ್ತನೆ: ಪಾಕ್ ನಡೆಗೆ ಆಫ್ಘಾನಿಸ್ತಾನ ಖಂಡನೆ

ಭಾರತದ ಪರ ಬೇಹುಗಾರಿಕೆ ನಡೆಸಿದ ಆರೋಪದ ಮೇರೆಗೆ ಗಲ್ಲುಶಿಕ್ಷೆಗೆ ಗುರಿಯಾಗಿರುವ ಭಾರತೀಯ ಪ್ರಜೆ ಕುಲ್'ಭೂಷಣ್ ಜಾಧವ್ ಅವರ ಪತ್ನಿ ಹಾಗೂ ತಾಯಿಯೊಂದಿಗೆ ಅಮಾನವೀಯವಾಗಿ ನಡೆದುಕೊಂಡ ಪಾಕಿಸ್ತಾನದ ವರ್ತನೆಗೆ ಆಫ್ಘಾನಿಸ್ತಾನ...
ಭಾರತದಲ್ಲಿರುವ ಆಫ್ಘಾನಿಸ್ತಾನದ ರಾಯಭಾರಿ ಶೈದಾ ಮೊಹಮ್ಮದ್ ಅಬ್ದಾಲಿ
ಭಾರತದಲ್ಲಿರುವ ಆಫ್ಘಾನಿಸ್ತಾನದ ರಾಯಭಾರಿ ಶೈದಾ ಮೊಹಮ್ಮದ್ ಅಬ್ದಾಲಿ
Updated on
ಭೋಪಾಲ್: ಭಾರತದ ಪರ ಬೇಹುಗಾರಿಕೆ ನಡೆಸಿದ ಆರೋಪದ ಮೇರೆಗೆ ಗಲ್ಲುಶಿಕ್ಷೆಗೆ ಗುರಿಯಾಗಿರುವ ಭಾರತೀಯ ಪ್ರಜೆ ಕುಲ್'ಭೂಷಣ್ ಜಾಧವ್ ಅವರ ಪತ್ನಿ ಹಾಗೂ ತಾಯಿಯೊಂದಿಗೆ ಅಮಾನವೀಯವಾಗಿ ನಡೆದುಕೊಂಡ ಪಾಕಿಸ್ತಾನದ ವರ್ತನೆಗೆ ಆಫ್ಘಾನಿಸ್ತಾನ ಶನಿವಾರ ತೀವ್ರ ಖಂಡನೆ ವ್ಯಕ್ತಪಡಿಸಿದೆ. 
ಜಾಧವ್ ಪ್ರಕರಣ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಭಾರತದಲ್ಲಿರುವ ಆಫ್ಘಾನಿಸ್ತಾನದ ರಾಯಭಾರಿ ಶೈದಾ ಮೊಹಮ್ಮದ್ ಅಬ್ದಾಲಿ ಅವರು, ಮನುಷ್ಯರನ್ನು ಮನಷ್ಯರಂತೆಯೇ ನೋಡಬೇಕು. ಅವರನ್ನು ರಾಜಕೀಯ ಬಲಿಪಶುಗಳಾಗಿ ಮಾಡಬಾರದು ಎಂದು ಹೇಳಿದ್ದಾರೆ. 
ಸಾಕಷ್ಟು ಬೆಳವಣಿಗೆ ಹಾಗೂ ವಿವಾದಗಳ ಬಳಿ ಪಾಕಿಸ್ತಾನ ಕೊನೆಗೂ ಜಾಧವ್ ಪತ್ನಿ ಚೇತಾಂಕುಲ್ ಹಾಗೂ ತಾಯಿ ಅವಾಂತಿಯವರಿಗೆ ಜಾಧವ್ ಅವರನ್ನು ಭೇಟಿಯಾಗಲು ಅವಕಾಶ ನೀಡಿತ್ತು. ಇದರಂತೆ ಕುಲಭೂಷಣ್​ ಜಾಧವ್​ ಅವರು ಡಿ.25 ರಂದು ಗಾಜಿನ ತಡೆಗೋಡೆ ಮಧ್ಯೆ ತಮ್ಮ ತಾಯಿ ಮತ್ತು ಪತ್ನಿಯನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. 
ಇಸ್ಲಾಮಾಬಾದ್​ನಲ್ಲಿರುವ ಪಾಕ್​ವಿದೇಶಾಂಗ ಸಚಿವಾಲಯದ ಕಚೇರಿಯಲ್ಲಿ ಭೇಟಿಗೆ ವ್ಯವಸ್ಥೆ ಮಾಡಲಾಗಿತ್ತು. ಇದರಂತೆ ಡಿ.25ರ ಮಧ್ಯಾಹ್ನ 1.35ಕ್ಕೆ ಭೇಟಿಗೆ ಅವಕಾಶ ಮಾಡಿಕೊಡಲಾಯಿತು. ಸುಮಾರು 30 ನಿಮಿಷಗಳ ಕಾಲ ಜಾಧವ್,​ ತಾಯಿ ಮತ್ತು ಪತ್ನಿ ಜೊತೆ ಮಾತುಕತೆ ನಡೆಸಿದ್ದರು.
ಪತಿಯನ್ನು ಭೇಟಿ ಮಾಡಿದ ಬಳಿಕ ಚೇತಾಂಕುಲ್ ಅವರು ಹೊರಬರುತ್ತಿದ್ದರು. ಈ ವೇಳೆ ಪಾಕಿಸ್ತಾನದ ಪತ್ರಕರ್ತರೊಬ್ಬರು ಚೇತಾಂಕುಲ್ ಅವರಿಗೆ ಕಿರುಕುಳ ನೀಡಿದ್ದರು. ಚೇತಾಂಕುಲ್ ಅವರನ್ನು ನೋಡುತ್ತಿದ್ದಂತೆಯೇ ಗಟ್ಟಿಯಾದ ದನಿಯಲ್ಲಿ ಕೂಗಿದ ಪತ್ರಕರ್ತ, ನಿಮ್ಮ ಪತಿ ಸಾವಿರಾರು ಮುಗ್ದ ಪಾಕಿಸ್ತಾನಿಗಳನ್ನು ಕೊಲ್ಲುತ್ತಾರೆ... ನೀವೇನು ಹೇಳುತ್ತೀರಾ? ಎಂದು ಪ್ರಶ್ನಿಸಿದ್ದರು. ಬಳಿಕ ಜಾಧವ್ ತಾಯಿಯನ್ನೂ ಪ್ರಶ್ನಿಸಿದ ಪತ್ರಕರ್ತ ಕೊಲೆಗಡುಕ ಮಗನನ್ನು ಭೇಟಿಯಾದ ಬಳಿಕ ಏನು ಹೇಳುತ್ತೀರಾ ಎಂದು ಪ್ರಶ್ನಿಸಿದ್ದಾನೆ. 
ಇದಲ್ಲದೆ ಕುಲಭೂಷಣ್ ಜಾಧವ್ ಅವರ ತಾಯಿ ಹಾಗೂ ಪತ್ನಿಯೊಂದಿಗೆ ಅಮಾನವೀಯವಾಗಿ ನಡೆದುಕೊಂಡಿದ್ದ ಪಾಕಿಸ್ತಾನ, ತಮ್ಮ ಪುತ್ರನನ್ನು ಭೇಟಿ ಮಾಡಲು ಹೋಗಿದ್ದ ತಾಯಿಯೊಂದಿಗೆ ಮಾತೃಭಾಷಣೆಯಲ್ಲಿ ಮಾತನಾಡಲು ಪಾಕ್ ಅಧಿಕಾರಿಗಳು ಅನುಮತಿ ನಿರಾಕರಿಸಿದ್ದರು. ಅಲ್ಲದೆ, ಭೇಟಿಗೂ ಮುನ್ನ ಜಾಧವ್ ಪತ್ನಿ ಅವರ ಬಿಂದಿ, ಮಂಗಳಸೂತ್ರ, ಚಪ್ಪಲಿಗಳನ್ನು ತೆಗೆಸಿದ್ದರು. ಮರಳಿ ತೆರಳುವ ವೇಳಯೂ ಜಾಧವ್ ಪತ್ನಿ ಪಾದರಕ್ಷೆಗಳನ್ನು ವಾಪಸ್ ನೀಡುವಂತೆ ಕೇಳಿದರೂ ವಾಪಸ್ ನೀಡಿರಲಿಲ್ಲ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com