ಅರುಣಾಚಲ ಪ್ರದೇಶ ಬಯಲು ಶೌಚ ಮುಕ್ತ!

ಸಿಕ್ಕಿಂ ನಂತರ ಬಯಲು ಶೌಚ ಮುಕ್ತವಾದ ಎರಡನೇ ಈಶಾನ್ಯ ರಾಜ್ಯ ಎಂಬ ಹೆಗ್ಗಳಿಕೆಗೆ ಅರುಣಾಚಲ ಪ್ರದೇಶ ಪಾತ್ರವಾಗಿದೆ.
ಅರುಣಾಚಲ ಪ್ರದೇಶ ಸಿಎಂ
ಅರುಣಾಚಲ ಪ್ರದೇಶ ಸಿಎಂ
ಅರುಣಾಚಲ ಪ್ರದೇಶ: ಸಿಕ್ಕಿಂ ನಂತರ ಬಯಲು ಶೌಚ ಮುಕ್ತವಾದ ಎರಡನೇ ಈಶಾನ್ಯ ರಾಜ್ಯ ಎಂಬ ಹೆಗ್ಗಳಿಕೆಗೆ ಅರುಣಾಚಲ ಪ್ರದೇಶ ಪಾತ್ರವಾಗಿದೆ. 
ಅರುಣಾಚಲ ಪ್ರದೇಶ ಬಯಲು ಶೌಚ ಮುಕ್ತವಾಗುವುದಕ್ಕೆ ಬಾಕಿ ಇದ್ದ ಮೂರು ಜಿಲ್ಲೆಗಳು  ಸುಬನ್ಸಿರಿ, ಸಿಯಾಂಗ್ ಮತ್ತು ಚಾಂಗ್ಲ್ಯಾಂಗ್ ಜಿಲ್ಲೆಗಳು ಬಯಲು ಶೌಚ ಮುಕ್ತ ಎಂದು ಅಧಿಕೃತವಾಗಿ ಘೋಷಿಸಲಾಗಿದ್ದು, ಈಗ ಅರುಣಾಚಲ ಪ್ರದೇಶ ಸಂಪೂರ್ಣ ಬಯಲು ಶೌಚ ಮುಕ್ತ ರಾಜ್ಯವಾಗಿ ಘೋಷಣೆಯಾಗಿದೆ. 
ಅರುಣಾಚಲ ಪ್ರದೇಶದಲ್ಲಿ 21 ಜಿಲ್ಲೆಗಳಿದ್ದು 2019 ರ ಅಕ್ಟೋಬರ್ 2 ಕ್ಕೆ ಬಯಲು ಶೌಚ ಮುಕ್ತವಾಗಬೇಕೆಂಬ ಗಡುವು ನಿಗದಿಪಡಿಸಲಾಗಿತ್ತು. ನಿಗದಿತ ಗಡುವಿಗಿಂತಲೂ ಮುನ್ನವೇ ಅರುಣಾಚಲ ಪ್ರದೇಶ ಬಯಲು ಶೌಚ ಮುಕ್ತ ರಾಜ್ಯವಾಗಿ ಘೋಷಣೆಯಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com