ತಪ್ಪು ರೈಲು ಹತ್ತಿದ್ದ ಅಪ್ರಾಪ್ತೆಯ ಅಪಹರಣ, ಅತ್ಯಾಚಾರ, ಮಾರಾಟ!

ಮಾನವ ಕಳ್ಳ ಸಾಗಣೆ ಹಾಗೂ ಮಾಂಸದಂಧೆ ಮಾಫಿಯಾಗೆ ಸಿಕ್ಕಿ ನಲುಗಿ ಹೋಗುತ್ತಿದ್ದ 15 ವರ್ಷದ ಅಪ್ರಾಪ್ತ ಬಾಲಕಿಯೋರ್ವಳನ್ನು ದೆಹಲಿ ಪೊಲೀಸರು ರಕ್ಷಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಮಾನವ ಕಳ್ಳ ಸಾಗಣೆ ಹಾಗೂ ಮಾಂಸದಂಧೆ ಮಾಫಿಯಾಗೆ ಸಿಕ್ಕಿ ನಲುಗಿ ಹೋಗುತ್ತಿದ್ದ 15 ವರ್ಷದ ಅಪ್ರಾಪ್ತ ಬಾಲಕಿಯೋರ್ವಳನ್ನು ದೆಹಲಿ ಪೊಲೀಸರು ರಕ್ಷಿಸಿದ್ದಾರೆ.

ಎಲ್ಲಿಗೋ ಹೋಗ ಬೇಕಿದ್ದ ಬಾಲಕಿ ತಪ್ಪಾದ ರೈಲು ಹತ್ತಿ ಮತ್ತೆಲ್ಲಿಗೋ ಹೋಗಿ ಅಲ್ಲಿ ಮಾನವ ಕಳ್ಳ ಸಾಗಣೆ ಮತ್ತು ಮಾಂಸದಂಧೆ ಮಾಫಿಯಾದವರ ಕೈಗೆ ಸಿಲುಕಿ ನರಕ ಅನುಭವಿಸುತ್ತಿದ್ದ ಆಪ್ರಾಪ್ತ ಬಾಲಕಿಯನ್ನು ದೆಹಲಿ  ಪೊಲೀಸರು ಮಹಿಳಾ ಆಯೋಗದ ನೆರವಿನಿಂದ ದೆಹಲಿಯಲ್ಲಿರುವ ಹುಮಾಯೂನ್ ಸಮಾಧಿ ಬಳಿ ರಕ್ಷಿಸಿದ್ದಾರೆ. ಅಂತೆಯೇ ಬಾಲಕಿಯ ಮಾರಾಟ ಮಾಡಲು ಯತ್ನಿಸಿದ್ದ ಇಬ್ಬರು ಆರೋಪಿಗಳನ್ನು ಕೂಡ ವಶಕ್ಕೆ ಪಡೆದಿದ್ದಾರೆ.

ಮೂಲಗಳ ಪ್ರಕಾರ 15 ವರ್ಷದ ಆಪ್ರಾಪ್ತ ಬಾಲಕಿ ಛತ್ತೀಸ್ ಘಡದ ಮೂಲದವಳಾಗಿದ್ದು, ಈ ಹಿಂದೆ ಅಂದರೆ ಕಳೆದ ಅಕ್ಟೋಬರ್ ನಲ್ಲಿ ತಮ್ಮ ಬಂಧುಗಳನ್ನು ನೋಡಲು ರೈಲು ಹತ್ತಿದ್ದಳು. ಆದರೆ ಆಪ್ರಾಪ್ತೆ ತಪ್ಪಾದ ರೈಲು ಹತ್ತಿ  ದೂರದ ದೆಹಲಿ ತಲುಪಿದ್ದಳು. ಈ ವೇಳೆ ಏನು ಮಾಡಬೇಕು ಎಂದು ತೋಚದೆ ಅಲ್ಲೇ ಸಮೀಪದಲ್ಲಿ ನೀರಿನ ಬಾಟಲಿಗಳನ್ನು ಮಾರುತ್ತಿದ್ದ ಅರ್ಮಾನ್ ಎಂಬಾತನನ್ನು ಸಂಪರ್ಕಿಸಿದ ಆಪ್ರಾಪ್ತೆ ತನ್ನ ಅಸಹಾಯಕತೆಯನ್ನು  ತೋಡಿಕೊಂಡಿದ್ದಾಳೆ. ಇದನ್ನೇ ತನ್ನ ದುಷ್ಕೃತ್ಯಕ್ಕೆ ಬಳಸಿಕೊಂಡ ಅರ್ಮಾನ್ ಆಕೆಯನ್ನು ಸರೈ ಕಲೆ ಖಾನ್ ಪ್ರದೇಶದಲ್ಲಿರುವ ತನ್ನ ಪತ್ನಿ ಹಶೀನಾ ಎಂಬಾಕೆಯ ಬಳಿಗೆ ಕರೆದೊಯ್ಯುತ್ತಾನೆ. ಬಳಿಕ ತನ್ನ ಪತ್ನಿಯ ಸಹಕಾರದಿಂದಲೇ  ಆಕೆಯ ಮೇಲೆ ಬಲಾತ್ಕಾರ ಮಾಡಿ ಆಕೆಯನ್ನು ಪಪ್ಪು ಯಾದವ್ ಎಂಬಾತನಿಗೆ ಸುಮಾರು 70 ಸಾವಿರ ರು.ಗೆ ಮಾರಾಟ ಮಾಡುತ್ತಾನೆ.

ಆಪ್ರಾಪ್ತೆಯನ್ನು ಸುಮಾರ 2 ತಿಂಗಳಕಾಲ ತನ್ನ ಬಳಿ ಇರಿಸಿಕೊಂಡಿದ್ದ ಪಪ್ಪುಯಾದವ್ ಆಕೆಯನ್ನು ಲೈಂಗಿಕವಾಗಿ ಬಳಿಸಿಕೊಂಡಿದ್ದಷ್ಟೇ ಅಲ್ಲದೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಆಕೆಯ ಮೇಲೆ ಹಲ್ಲೆ ನಡೆಸುತ್ತಾನೆ. ಸುಮಾರು 2  ತಿಂಗಳ ಕಾಲ ನರಕ ಯಾತನೆ ಬಳಿಕ ಆಕೆಯನ್ನು ಅಲ್ಲಿಂದ ಕರೆತರುವ ಹಶೀನಾ ಹಜ್ರತ್ ನಿಜಾಮುದ್ದೀನ್ ರೈಲ್ವೇ ನಿಲ್ದಾಣಕ್ಕೆ ಕರೆತಂದು ಅಲ್ಲಿ ಅವಳಿಗೆ ಮತ್ತು ಬರುವ ಪಾನೀಯ ನೀಡುತ್ತಾಳೆ. ಅದನ್ನು ಕುಡಿದ ಆಪ್ರಾಪ್ತೆ ಪ್ರಜ್ಞೆ  ಕಳೆದುಕೊಳ್ಳುತ್ತಾಳೆ. ಆಕೆಯನ್ನು 212 ವರ್ಷದ ಮಹಮದ್ ಅಫ್ರೋಜ್ ಎಂಬಾತನ ವಶಕ್ಕೆ ಹಶೀನಾ ನೀಡುತ್ತಾಳೆ. ಹಶೀನಾಗೆ ಸ್ವಲ್ಪ ಹಣ ನೀಡಿದ ಮಹಮದ್ ಅಪ್ರೋಜ್ ರೈಲು ನಿಲ್ದಾಣದ ಸಮೀಪದಲ್ಲೇ ಆಕೆಯ ಮೇಲೆ  ಅತ್ಯಾಚಾರ ಮಾಡುತ್ತಾನೆ. ಆದರೆ ಈ ವೇಳೆ ಆತನಿಂದ ತಪ್ಪಿಸಿಕೊಳ್ಳುವ ಅಪ್ರಾಪ್ತೆ ಅಲ್ಲಿಂದ ಓಡಿ ಹೋಗುತ್ತಾಳೆ. ಇದನ್ನು ಕಂಡ ಕೆಲವರು ಕೂಡಲೇ ಪೊಲೀಸರಿಗೆ ಕರೆ ಮಾಡಿ ವಿಷಯ ಮುಟ್ಟಿಸುತ್ತಾರೆ.

ಸ್ಥಳಕ್ಕಾಗಮಿಸಿದ ಪೊಲೀಸರು ಆಕೆಯನ್ನು ರಕ್ಷಿಸಿ ವಿಚಾರಿಸಿದಾಗ ಪ್ರಕರಣ ಬಯಲಾಗುತ್ತದೆ. ಪ್ರಸ್ತುತ ದೆಹಲಿಯ ಸನ್ ಲೈಟ್ ಕಾಲೋನಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪ್ರಕರಣ ಸಂಬಂಧ ಸರೈ ಕಲೆ ಖಾನ್ ಮತ್ತು  ಫರೀದಾ ಬಾದ್ ನಲ್ಲಿ ದಾಳಿ ನಡೆಸಿ ಮಹಮದ್ ಅಪ್ರೋಜ್ ಮತ್ತು ಪಪ್ಪು ಯಾದವ್ ನನ್ನು ಪೊಲೀಸರು ಬಂಧಿಸುತ್ತಾರೆ. ಅಂತೆಯೇ ಅಪ್ರಾಪ್ತೆಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಿಕೊಟ್ಟಿದ್ದಾರೆ. ಮತ್ತೋರ್ವ ಆರೋಪಿ ಹಶೀನಾ  ನಾಪತ್ತೆಯಾಗಿದ್ದು. ಆಕೆ ಸೇರಿದಂತೆ ಎಲ್ಲ ಮೂವರು ಆರೋಪಿಗಳ ವಿರುದ್ಧ 2006 ಬಾಲ್ಯವಿವಾಹ ನಿಷೇಧ ಕಾಯ್ದೆ, ಮಕ್ಕಳ ಮೇಲಿನ ಲೈಂಗಿಕ ಅಪರಾಧ ತಡೆ ಕಾಯ್ದೆಯಡಿಯಲ್ಲಿ ದೂರು ದಾಖಲಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com