ಉತ್ತರ ಪ್ರದೇಶ: ಬಹುಸಂಖ್ಯಾತರಾಗುತ್ತಿರುವ ಸೋಕಾಲ್ಡ್ 'ಅಲ್ಪಸಂಖ್ಯಾತರು'!

ವಿಧಾನಸಭಾ ಚುನಾವಣೆಗೆ ಸಜ್ಜುಗೊಂಡಿರುವ ಉತ್ತರ ಪ್ರದೇಶದಲ್ಲಿ ಹಿಂದೂಗಳ ಸಂಖ್ಯೆ ಕ್ಷೀಣಿಸುತ್ತಿದ್ದು, ರಾಜ್ಯದಲ್ಲಿ ಸೋಕಾಲ್ಡ್ ಅಲ್ಪಸಂಖ್ಯಾತರೇ ಬಹುಸಂಖ್ಯಾತರಾಗುತ್ತಿರುವ ಅಂಶ ಬೆಳಕಿಗೆ ಬಂದಿದೆ.
ಉತ್ತರ ಪ್ರದೇಶ: ಬಹುಸಂಖ್ಯಾತರಾಗುತ್ತಿರುವ ಸೋಕಾಲ್ಡ್ 'ಅಲ್ಪಸಂಖ್ಯಾತರು'! (ಸಾಂಕೇತಿಕ ಚಿತ್ರ)
ಉತ್ತರ ಪ್ರದೇಶ: ಬಹುಸಂಖ್ಯಾತರಾಗುತ್ತಿರುವ ಸೋಕಾಲ್ಡ್ 'ಅಲ್ಪಸಂಖ್ಯಾತರು'! (ಸಾಂಕೇತಿಕ ಚಿತ್ರ)
ನವದೆಹಲಿ: ವಿಧಾನಸಭಾ ಚುನಾವಣೆಗೆ ಸಜ್ಜುಗೊಂಡಿರುವ ಉತ್ತರ ಪ್ರದೇಶದಲ್ಲಿ ಹಿಂದೂಗಳ ಸಂಖ್ಯೆ ಕ್ಷೀಣಿಸುತ್ತಿದ್ದು, ರಾಜ್ಯದಲ್ಲಿ ಸೋಕಾಲ್ಡ್ ಅಲ್ಪಸಂಖ್ಯಾತರೇ ಬಹುಸಂಖ್ಯಾತರಾಗುತ್ತಿರುವ ಅಂಶ ಬೆಳಕಿಗೆ ಬಂದಿದೆ. 
ಜನಗಣತಿ ಕಚೇರಿಯಿಂದ ಅಂಕಿ-ಅಂಶಗಳ ಬಗ್ಗೆ ಅಧಿಕೃತ ಮಾಹಿತಿಯೊಂದಿಗೆ  ಉತ್ತರ ಪ್ರದೇಶದ ಬಹುತೇಕ ಜಿಲ್ಲೆಗಳಲ್ಲಿ ಹಿಂದೂಗಳ ಜನಸಂಖ್ಯೆ ಕ್ಷೀಣಗೊಳ್ಳುತ್ತಿರುವುದರ ಬಗ್ಗೆ ದಿ ಸಂಡೇ ಸ್ಟ್ಯಾಂಡರ್ಡ್ ವರದಿ ಪ್ರಕಟಿಸಿದೆ. 
2011 ರ ಜನಗಣತಿ ಪ್ರಕಾರ ಉತ್ತರ ಪ್ರದೇಶದಲ್ಲಿ 199,812,341 ಜನಸಂಖ್ಯೆ ಇದ್ದು, 159,312,654 ಹಿಂದೂಗಳಿದ್ದರೆ, 38,483,967 ಮುಸ್ಲಿಮರಿದ್ದರು. 2001 ರಲ್ಲಿ ಶೇ.80 ರಷ್ಟಿದ್ದ ಹಿಂದೂಗಳ ಜನಸಂಖ್ಯೆ 2011 ರಲ್ಲಿ ಶೇ. 79.73 ಕ್ಕೆ ಕುಸಿದಿದೆ. ಆದರೆ 2001 ರಲ್ಲಿ ಶೇ. 18.50 ರಷ್ಟಿದ್ದ ಮುಸ್ಲಿಮರ ಜನಸಂಖ್ಯೆ 2011 ರ ವೇಳೆಗೆ 19.26 ರಷ್ಟಾಗಿದೆ. 
2001 ರಿಂದ 2011 ರ ವೆಳೆಗೆ ಅಂದರೆ 10 ವರ್ಷಗಳಲ್ಲಿ ಜನಸಂಖ್ಯಾ ಬೆಳವಣಿಗೆಯ ಅನುಪಾತದಲ್ಲಿ ಸಾಕಷ್ಟು ಬದಲಾವಣೆಗಳಾಗಿದೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಮೂಲಕವೇ ವರದಿ ಪ್ರಕವಾಗಿದ್ದು, ಹಿಂದೂಗಳ ಜನಸಂಖ್ಯೆ ಕುಸಿಯುತ್ತಿರುವುದು ಅಧಿಕೃತವಾಗಿದೆ. 
ಸಹರಣ್ ಪುರ ಜಿಲ್ಲೆಯಲ್ಲಿ 2001-2011 ರ ನಡುವೆ ಹಿಂದೂಗಳ ಜನಸಂಖ್ಯೆ ಶೇ 2.74 ರಷ್ಟು ಕುಸಿದಿದೆ. 2001 ರಲ್ಲಿ ಶೇ.59.49 ರಷ್ಟಿದ್ದ ಹಿಂದೂಗಳ ಜನಸಂಖ್ಯೆ  2011 ರಲ್ಲಿ ಶೇ.56.74 ರಷ್ಟಾಗಿದೆ. 2001 ರಲ್ಲಿ ಶೇ.39.11 ರಷ್ಟಿದ್ದ ಮುಸ್ಲಿಮರ ಜನಸಂಖ್ಯೆ 2011 ರಲ್ಲಿ ಶೇ.41.95 ಕ್ಕೆ ಏರಿಕೆಯಾಗಿದೆ. 
ಉತ್ತರ ಪ್ರದೇಶದಲ್ಲಿ ಚುನಾವಣೆ ಬಂತೆಂದರೆ ಧರ್ಮ, ಜಾತಿಗಳನ್ನು ಹಿಡಿದು ಓಟ್ ಬ್ಯಾಂಕ್ ರಾಜಕೀಯ ಮಾಡಲು ಟೊಂಕ ಕಟ್ಟಿ ನಿಲ್ಲುವ ರಾಜಕಾರಣಿಗಳ ಚಟುವಟಿಕೆಗಳ ನಡುವೆ, ಜನಸಂಖ್ಯೆಯ ಅನುಪಾತದಲ್ಲಿ ಅತ್ಯಂತ ಹೆಚ್ಚು  ಬದಲಾವಣೆಯಾಗುತ್ತಿರುವ ಬೆಳವಣಿಗೆ ಬಹಿರಂಗವಾಗಿದೆ. 
ಸಹರಣ್ ಪುರ ಜಿಲ್ಲೆಯಲ್ಲೇ ಇರುವ ದಿಯೋಬಂದ್ ನಲ್ಲಿ ಕಳೆದ 10 ವರ್ಷಗಳಲ್ಲಿ ಹಿಂದೂಗಳ ಜನಸಂಖ್ಯೆ ಶೇ.10.39 ರಷ್ಟು ಕುಸಿತ ಕಂಡಿದೆ. ಅಂದರೆ 2001 ರಲ್ಲಿ ಶೇ. 70.19ರಷ್ಟಿದ್ದ ಹಿಂದೂಗಳ ಜನಸಂಖ್ಯೆ  2011 ರಲ್ಲಿ ಶೇ.59.80 ರಷ್ಟಕ್ಕೆ ಕುಸಿತ ಕಂಡಿದೆ. ಇದೇ ದಿಯೋಬಂದ್ ನಲ್ಲಿ ಕಳೆದ 10 ವರ್ಷಗಳಲ್ಲಿ ಮುಸ್ಲಿಮರ ಜನಸಂಖ್ಯೆ ಶೇ. 10.68 ರಷ್ಟು ಏರಿಕೆಯಾಗಿದೆ ಎಂದು ಜನಗಣತಿ ಅಂಕಿ-ಅಂಶಗಳು ಹೇಳುತ್ತಿವೆ. 
70 ಜಿಲ್ಲೆಗಳ ಪೈಕಿ 57 ಜಿಲ್ಲೆಗಳಲ್ಲಿನ ಜನಗಣತಿ ಅಂಕಿ-ಅಂಶಗಳು ಹೊರಬಿದ್ದಿದ್ದು, ಈ ಪೈಕಿ ಬಹುತೇಕ ಜಿಲ್ಲೆಗಳಲ್ಲಿ ಹಿಂದೂಗಳ ಜನಸಂಖ್ಯೆ ಕಡಿಮೆಯಾಗಿರುವ ಬಗ್ಗೆ ದಿ ಸಂಡೇ ಸ್ಟ್ಯಾಂಡರ್ಡ್ ವರದಿ ಪ್ರಕಟಿಸಿದೆ. ಇನ್ನು ಕೋಮುಗಲಭೆ ಪೀಡಿತ ಮುಜಾಫರ್ ನಗರದಲ್ಲಿಯೂ ಇದೇ ಪರಿಸ್ಥಿತಿ ಇದ್ದು, ಹಿಂದೂಗಳ ಜನಸಂಖ್ಯೆ ಕಳೆದ 10 ವರ್ಷಗಳಲ್ಲಿ ಶೇ.3.20 ರಷ್ಟು ಕುಸಿದಿದ್ದರೆ, ಮುಸ್ಲಿಮ್ ಸಮುದಾಯದ ಜನಸಂಖ್ಯೆ ಶೇ.3.22 ರಷ್ಟು ಏರಿಕೆಯಾಗಿದೆ. 
ಇನ್ನು ಇತ್ತೀಚಿನ ದಿನಗಳಲ್ಲಿ ಹಿಂದೂಗಳ ವಲಸೆ ಕಾರಣದಿಂದ ಅತಿ ಹೆಚ್ಚು ಚರ್ಚೆಗೊಳಗಾಗಿದ್ದ ಕೈರಾನ ಜಿಲ್ಲೆಯಲ್ಲೂ ಸಹ ಹಿಂದೂಗಳ ಜನಸಂಖ್ಯೆ ಕ್ಷೀಣಿಸಿದ್ದು, ಶೇ.4.16 ರಷ್ಟು ಇಳಿಕೆ ಕಂಡಿದ್ದು, 2001 ರಲ್ಲಿ ಶೇ.  49.54 ರಷ್ಟಿದ್ದ ಜನಸಂಖ್ಯೆ 2011 ರ ವೇಳೆಗೆ 45.38 ಕ್ಕೆ ಕುಸಿದಿದೆ. ಆದರೆ ಮುಸ್ಲಿಮ್ ಸಮುದಾಯದ ಜನಸಂಖ್ಯೆ 2001 ರಿಂದ 2011 ರ ಅವಧಿಯಲ್ಲಿ ಶೇ. 48.61 ರಿಂದ ಶೇ. 52.94 ರಷ್ಟು ಏರಿಕೆಯಾಗಿದೆ. 
ಬಿಜ್ನೋರ್ ನಲ್ಲಿ ಹಿಂದೂಗಳ ಜನಸಂಖ್ಯೆ 1.23, ಮೌರಾದಾಬಾದ್ ನಲ್ಲಿ ಶೇ.1.70, ರಾಮ್ ಪುರ್ ನಲ್ಲಿ ಶೇ. 1.07 ರಷ್ಟು ಕುಸಿತ ಕಂಡಿದ್ದರೆ, ಮುಸ್ಲಿಮ್ ಸಮುದಾಯದ ಜನಸಂಖ್ಯೆ ಅನುಕ್ರಮವಾಗಿ ಶೇ.1.33, 1.58, ಶೇ. 1.44 ರಷ್ಟು ಬೆಳವಣಿಗೆಯಾಗಿದೆ. ಹಿಂದೂಗಳ ಜನಸಂಖ್ಯೆ ಕುಸಿಯಲು ನಗರಗಳಿಗೆ ವಲಸೆ ಸೇರಿದಂತೆ ಹಲವು ಕಾರಣಗಳಿವೆ, ಅಂತೆಯೇ ಮುಸ್ಲಿಮ್ ಸಮುದಾಯದ ಬೆಳವಣಿಗೆಗೆ ಕಳಪೆ ಶಿಕ್ಷಣ, ಆರೋಗ್ಯ ಸೇವೆ ಸೇರಿದಂತೆ ಹಲವು ಕಾರಣಗಳು ಇರುವ ಸಾಧ್ಯತೆ ಇದೆ ಎಂದು ಸರ್ಕಾರದ ಅಧಿಕಾರಿಯೊಬ್ಬರು ಹೇಳಿದ್ದಾರೆ. ಉತ್ತರ ಪ್ರದೇಶ ಮತ್ತೊಂದು ಕಾಶ್ಮೀರವಾಗಬಹುದು ಎಂದು ಸಂಸದ ಯೋಗಿ ಆದಿತ್ಯನಾಥ್ ಇತ್ತೀಚೆಗೆ ಹೇಳಿಕೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com