
ನವದೆಹಲಿ: ಉತ್ತರಪ್ರದೇಶ ವಿಧಾನಸಭೆ ಚುನಾವಣೆ ಮತದಾನಕ್ಕೆ ಇನ್ನು ಐದು ದಿನಗಳು ಬಾಕಿ ಇರುವಂತೆ ಸಮಾಜವಾದಿ ಪಕ್ಷದ ಎಲ್ಲಾ ಸ್ಥಾನಗಳಿಗೂ ಗೌರವ್ ಭಾಟಿಯಾ ರಾಜಿನಾಮೆ ನೀಡಿದ್ದಾರೆ.
ರಾಷ್ಟ್ರೀಯ ಅಧ್ಯಕ್ಷ ಕಾನೂನು ವಿಂಗ್ ಸೇರಿದಂತೆ ಸಮಾಜವಾದಿ ಪಕ್ಷದ ಎಲ್ಲಾ ಸ್ಥಾನಗಳಿಗೂ ರಾಜಿನಾಮೆ ನೀಡಿರುವುದಾಗಿ ಭಾಟಿಯಾ ಹೇಳಿದ್ದಾರೆ.
ಇಂತಹ ಕಠಿಣ ನಿರ್ಧಾರವನ್ನು ಏತಕ್ಕಾಗಿ ತೆಗೆದುಕೊಂಡಿದ್ದಾಗಿ ಗೌರವ್ ಭಾಟಿಯಾ ಹೇಳಿಲ್ಲ. ಆದರೆ ತಮ್ಮ ರಾಜಿನಾಮೆ ಪತ್ರವನ್ನು ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಮತ್ತು ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರಿಗೆ ರವಾನಿಸಿರುವುದಾಗಿ ತಿಳಿಸಿದ್ದಾರೆ.
ಕೆಲ ದಿನಗಳಿಂದ ಸಮಾಜವಾದಿ ಪಕ್ಷದಲ್ಲಿ ರಾಜಿನಾಮೆ ಪರ್ವ ಮುಂದುವರೆದಿದೆ. ಮುಲಾಯಂ ಸಿಂಗ್ ಯಾದವ್ ಆಪ್ತ ಅಂಬಿಕಾ ಚೌಧರಿ, ಅಶು ಯಾದವ್ ಪಕ್ಷದಿಂದ ಹಿಂದೆ ಸರಿದಿದ್ದರು.
ಎರಡು ಹಂತಗಳಲ್ಲಿ ಉತ್ತರಪ್ರದೇಶ ವಿಧಾನಸಭೆ ಚುನಾವಣೆಗೆ ಮತದಾನ ನಡೆಯಲಿದೆ. ಫೆಬ್ರವರಿ 11 ಮತ್ತು 15 ರಂದು ಮತದಾನ ನಡೆಯಲಿವೆ.
Advertisement