ಕೋಬ್ರಾ ಕಮಾಂಡೋ ಪಡೆಯ 59 ಸಿಬ್ಬಂದಿ ಕರ್ತವ್ಯಕ್ಕೆ ಗೈರು: ಸಿಆರ್ ಪಿಎಫ್ ನಿಂದ ತನಿಖೆಗೆ ಆದೇಶ

ನಕ್ಸಲ್ ನಿಗ್ರಹ ದಳ- ಕೋಬ್ರಾ ಕಮಾಂಡೋ ಪಡೆಯ 59 ಸಿಬ್ಬಂದಿಗಳು ಏಕಾಏಕಿ ನಾಪತ್ತೆಯಾಗಿದ್ದು, ಸಿಆರ್ ಪಿಎಫ್ ಈ ಬಗ್ಗೆ ತನಿಖೆಗೆ ಆದೇಶ ನೀಡಿದೆ.
ಕೋಬ್ರಾ ಕಮಾಂಡೋ ಪಡೆಯ 59 ಸಿಬ್ಬಂದಿ ಏಕಾಏಕಿ ಕರ್ತವ್ಯಕ್ಕೆ ಗೈರು: ಸಿಆರ್ ಪಿಎಫ್ ನಿಂದ ತನಿಖೆಗೆ ಆದೇಶ
ಕೋಬ್ರಾ ಕಮಾಂಡೋ ಪಡೆಯ 59 ಸಿಬ್ಬಂದಿ ಏಕಾಏಕಿ ಕರ್ತವ್ಯಕ್ಕೆ ಗೈರು: ಸಿಆರ್ ಪಿಎಫ್ ನಿಂದ ತನಿಖೆಗೆ ಆದೇಶ
ಪಾಟ್ನಾ: ನಕ್ಸಲ್ ನಿಗ್ರಹ ದಳ- ಕೋಬ್ರಾ ಕಮಾಂಡೋ ಪಡೆಯ 59 ಸಿಬ್ಬಂದಿಗಳು ಏಕಾಏಕಿ ನಾಪತ್ತೆಯಾಗಿದ್ದು, ಸಿಆರ್ ಪಿಎಫ್ ಈ ಬಗ್ಗೆ ತನಿಖೆಗೆ ಆದೇಶ ನೀಡಿದೆ. 
ಬಿಹಾರದ ನಕ್ಸಲ್ ಪೀಡಿ ಪ್ರದೇಶಗಳಲ್ಲಿ ಕರ್ತವ್ಯಕ್ಕೆ ಹಾಜರಾಗಬೇಕಿದ್ದ ಪಡೆಯಲ್ಲಿದ್ದ 59 ಸಿಬ್ಬಂಡಿಗಳು, ಕರ್ತವ್ಯಕ್ಕೆ ಹಾಜರಾಗಬೇಕಿದ್ದ ಕೆಲವೇ ಗಂಟೆಗಳ ಮುನ್ನ ರೈಲಿನಿಂದ ಹೇಳದೇ ಕೇಳದೇ ಮನೆಗಳಿಗೆ ತೆರಳಿದ್ದಾರೆ. ಕೋಬ್ರಾ ಕಮಾಂಡೋ ಪಡೆಯ ಒಂದು ಸಮೂಹವೇ ಏಕಾಏಕಿ  ಕರ್ತವ್ಯಕ್ಕೆ ಗೈರಾಗಿರುವುದರ ಬಗ್ಗೆ ಸಿಆರ್ ಪಿಎಎಫ್ ತನಿಖೆಗೆ ಆದೆಷಿಸಿದೆ. 
600 ಕಮಾಂಡೋಗಳ ಗುಂಪು ತಮ್ಮ ಮೊದಲ ಹಂತದ ತರಬೇತಿಯನ್ನು ಮುಕ್ತಾಯಗೊಳಿಸಿತ್ತು. ಈಗ ನಾಪತ್ತೆಯಾಗಿರುವ 59 ಯೋಧರ ಗುಂಪು ನಕ್ಸಲ್ ನಿಗ್ರಹ ಚಟುವಟಿಕೆಗೆ ಸಂಬಂಧಿಸಿದಂತೆ 24 ವಾರಗಳ ತರಬೇತಿಗಾಗಿ ಗಯಾಗೆ ತೆರಳಿತ್ತು ಎಂದು ಸಿಆರ್ ಪಿಎಫ್ ಮಾಹಿತಿ ನೀಡಿದೆ. 
ಗಯಾ ತಲುಪಬೇಕಿದ್ದ ಮುಖ್ಯ ಪೇದೆಯ ನೇತೃತ್ವದ ತಂಡ ಮುಗಲ್ ಸರೈ ನಲ್ಲಿ ಜಮ್ಮು-ಸೇಲ್ಡಹ್ ಎಕ್ಸ್ ಪ್ರೆಸ್ ರೈಲಿನಿಂದ ಇಳಿದು ಮತ್ತೊಂದು ರೈಲನ್ನು ಹತ್ತಬೇಕಿತ್ತು. ಆದರೆ 59 ಸಿಬ್ಬಂದಿಗಳು ಮುಖ್ಯಪೇದೆ ಬಳಿ ತಾವು ವಾರಾಂತ್ಯದ ಹಿನ್ನೆಲೆಯಲ್ಲಿ ಮನೆಗೆ ತೆರಳುತ್ತಿರುವುದಾಗಿ ತಿಳಿಸಿದ್ದಾರೆ. ಅವರನ್ನು ತಡೆಯಲು ಮುಖ್ಯಪೇದೆ ಯತ್ನಿಸಿದರೂ 59 ಸಿಬ್ಬಂದಿಗಳು ಹೊರಟಿದ್ದಾರೆ, ನಂತರ ಈ ಬಗ್ಗೆ ಮುಖ್ಯಪೇದೆ ಸಿಆರ್ ಪಿಎಫ್ ಕಚೇರಿಗೆ ಮಾಹಿತಿ ನೀಡಿದ್ದು ತನಿಖೆಗೆ ಆದೇಶಿಸಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com