ಪೋಷಕರನ್ನು ಕಡೆಗಣಿಸಿದರೇ ವೇತನಕ್ಕೆ ಕತ್ತರಿ: ನೌಕರರಿಗೆ ಸರ್ಕಾರದ ಎಚ್ಚರಿಕೆ
ಗುವಾಹಟಿ: ಹೆತ್ತವರನ್ನು ಸರಿಯಾಗಿ ನೋಡಿಕೊಳ್ಳದೇ ಅವರನ್ನು ಕಡೆಗಣಿಸಿದರೇ ಅಂಥವರ ವೇತನ ಕಟ್ ಮಾಡುವುದಾಗಿ ತನ್ನ ಎಲ್ಲಾ ನೌಕರರಿಗೆ ಅಸ್ಸಾಂ ಸರ್ಕಾರ ಎಚ್ಚರಿಕೆ ನೀಡಿದೆ.
ಮಂಗಳವಾರ ಅಸ್ಸಾಂ ಹಣಕಾಸು ಸಚಿವ ಹಿಮಂತಾ ಬಿಸ್ವಾ ಮಂಡಿಸಿದ 2017-18ರ ಬಜೆಟ್ ನಲ್ಲಿ ಸರ್ಕಾರ ಪ್ರಸಕ್ತ ವರ್ಷದಿಂದ ನೌಕರರ ವೇತನಕ್ಕೆ ವಯಸ್ಸಾದ ಪೋಷಕರ ಆರೈಕೆ ಲಿಂಕ್ ಅಳವಡಿಸಲು ಉದ್ದೇಶಿಸಿದೆ. ಒಂದು ವೇಳೆ ನೌಕರರು ತಮ್ಮ ಪೋಷಕರನ್ನು ಸರಿಯಾಗಿ ಆರೈಕೆ ಮಾಡದಿದ್ದರೇ ಅವರ ಸಂಬಳದಲ್ಲಿ ಹಣ ಹಿಡಿಯಲಾಗುವುದು ಎಂದು ಸರ್ಕಾರ ತಿಳಿಸಿದೆ.
ವಯಸ್ಸಾದವರಿಗೆ ತಕ್ಕ ಮಟ್ಟಿಗೆ ಆರೈಕೆ ಮಾಡಬೇಕು, ಇಲ್ಲದಿದ್ದರೇ ನೌಕರರ ಸಂಬಳಕ್ಕೆ ಕತ್ತರಿ ಹಾಕುವ ಆದೇಶವನ್ನು ಶಾಸಕಾಂಗ ಹೊರಡಿಸಿದೆ , ಮಕ್ಕಳಾದವರು ಮುಪ್ಪಲ್ಲಿರುವ ಪೋಷಕರ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಬೇಕು ಎಂದು ಸಚಿವರು ತಮ್ಮ ಬಜೆಟ್ ಭಾಷಣದಲ್ಲಿ ತಿಳಿಸಿದ್ದಾರೆ.
ಸ್ವದೇಶಿ ಮೌಲ್ಯಗಳಲ್ಲಿ ನಂಬಿಕೆ ಇಟ್ಟಿರುವ ಬಿಜೆಪಿ ಸರ್ಕಾರ ಎಲ್ಲಾ ಸರ್ಕಾರಿ ನೌಕರರು ಸಾವಿರ ರೂಪಾಯಿ ಮೌಲ್ಯದ ಖಾದಿ ವಸ್ತ್ರ ಖರೀದಿಸುವುದು ಕಡ್ಡಾಯ ಎಂಬ ಆದೇಶ ಹೊರಡಿಸಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ