ಅಕ್ರಮ ಆಸ್ತಿ ಪ್ರಕರಣದಲ್ಲಿ ಹೋರಾಟ ನಡೆಸುತ್ತೀದ್ದೇನೆ, ನಾನು ಹೇಗೆ ಶಶಿಕಲಾ ಪರವಾಗಿದ್ದೇನೆ: ಸುಬ್ರಮಣಿಯನ್ ಸ್ವಾಮಿ

ತಮಿಳುನಾಡಿನಲ್ಲಿ ತಲೆದೋರಿರುವ ರಾಜಕೀಯ ಬಿಕ್ಕಟ್ಟಿನಲ್ಲಿ ನಾನು ಶಶಿಕಲಾ ಪರವಾಗಿದ್ದೇನೆ ಎಂಬ ಆರೋಪಗಳನ್ನು ಮಾಡಲಾಗುತ್ತಿದೆ, ಇದೆಲ್ಲಾ ...
ಸುಬ್ರಮಣಿಯನ್ ಸ್ವಾಮಿ
ಸುಬ್ರಮಣಿಯನ್ ಸ್ವಾಮಿ

ನವದೆಹಲಿ: ಅಕ್ರಮ ಆಸ್ತಿ ಪ್ರಕರಣದಲ್ಲಿ  ವಿ.ಕೆ. ಶಶಿಕಲಾ ಅವರ ವಿರುದ್ಧ ಕಾನೂನಾತ್ಮಕ ಹೋರಾಟ ನಡೆಸುತ್ತಿದ್ದೇನೆ,  ತಮಿಳುನಾಡಿನಲ್ಲಿ ತಲೆದೋರಿರುವ ರಾಜಕೀಯ ಬಿಕ್ಕಟ್ಟಿನಲ್ಲಿ ನಾನು ಶಶಿಕಲಾ ಪರವಾಗಿದ್ದೇನೆ ಎಂಬ ಆರೋಪಗಳನ್ನು ಮಾಡಲಾಗುತ್ತಿದೆ, ಇದೆಲ್ಲಾ ನಂಬುವಂತದ್ದಲ್ಲ ಎಂದು ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.

ಶಶಿಕಲಾ ತಮಿಳುನಾಡಿನ ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಹೇಳಿರುವ ಅವರು,  ಇಲ್ಲಸಲ್ಲದ ಆರೋಪ ಮಾಡುವುದು ವಿರೋಧ ಗಳಿಗೆ ಸುಲಭದ ಕೆಲಸ, ಮಾಡಲು ಏನು ಕೆಲಸವಿಲ್ಲದ ವಿಪಕ್ಷಗಳು ನನ್ನ ವಿರುದ್ಧ ಮಾಡಿರುವ ಆರೋಪಗಳಿಗೆ ಸೂಕ್ತವಾದ ಸಾಕ್ಷಿ ಒದಗಿಸಲಿ, ನಾನು ಶಶಿಕಲ್ ಪರವಾಗಿದ್ದೇನೆ ಎಂಬುದು ನಾನ್ ಸೆನ್ಸ್ ಹೇಳಿಕೆ ಎಂದು ಅವರು ಕಿಡಿಕಾರಿದ್ದಾರೆ.

ತಮಿಳುನಾಡಿನಲ್ಲಿ ಸದ್ಯ ಉಂಟಾಗಿರುವ ರಾಜಕೀಯ ಬಿಕ್ಕಟ್ಟಿನ್ನು ಬಗೆಹರಿಸಲು ರಾಜ್ಯಪಾಲರು ಮಧ್ಯಪ್ರವೇಶಿಸಬೇಕು ಎಂದು ಆಗ್ರಹಿಸಿರುವ ಸ್ವಾಮಿ, ಶಾಸಕರುಗಳಿಗೆ ಬೇರೆ ದಾರಿಯಿಲ್ಲದೇ ರಾಷ್ಟ್ರಪತಿಗಳನ್ನು ಭೇಟಿಮಾಡುವುದು ಅನಿವಾರ್ಯವಾಗಿದೆ ಎಂದು ಹೇಳಿದ್ದಾರೆ.
ರಾಜ್ಯಪಾಲರು ಎಲ್ಲೋ ಕಳೆದುಹೋಗಿದ್ದಾರೆ, ಅವರು ಎಲ್ಲಿದ್ದಾರೆ ಎಂಬುದು ಯಾರಿಗೂ ತಿಳಿದಿಲ್ಲ, ಹೀಗಿರುವಾಗ ಶಾಸಕರು ಏನು ಮಾಡಬೇಕು ಎಂದು ಪ್ರಶ್ನಿಸಿರುವ ಅವರು ಶಾಸಕರು ರಾಷ್ಚಪತಿಗಳನ್ನು ಭೇಟಿ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ,

ಸಿಎಂ ಹುದ್ದೆ ಆಕಾಂಕ್ಷಿ ಶಶಿಕಲಾ ನಟರಾಜನ್ ಇಂದು ಬಹುಮತ ಸಾಬೀತು ಪಡಿಸಲಿದ್ದು, ಕುದುರೆ ವ್ಯಾಪಾರದ ಭಯದಿಂದ 131 ಶಾಸಕರನ್ನು ಅಜ್ಞಾತ ಸ್ಥಳದಲ್ಲಿ ಇರಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com