
ನವದೆಹಲಿ: ಬಾಲಿವುಟ್ ನಟಿ ಜಿಯಾ ಖಾನ್ ನಿಗೂಢ ಸಾವು ಪ್ರಕರಣವನ್ನು ವಿಶೇಷ ತನಿಖಾ ತಂಡ(ಎಸ್ಐಟಿ)ದಿಂದ ತನಿಖೆ ನಡೆಸಬೇಕೆಂದು ಆಗ್ರಹಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಬಾಂಬೆ ಹೈಕೋರ್ಟ್ ಗುರುವಾರ ತಿರಸ್ಕರಿಸಿದೆ.
ಜಿಯಾ ಖಾನ್ ಸಾವಿನ ಸುತ್ತಲೂ ಸಾಕಷ್ಟು ಅನುಮಾನಗಳು ಮೂಡಿದ್ದು, ಹೀಗಾಗಿ ಪ್ರಕರಣವನ್ನು ವಿಶೇಷ ತನಿಖಾ ತಂಡಕ್ಕೆ ವಹಿಸುವಂತೆ ಕೋರಿ ಜಿಯಾ ಖಾನ್ ಅವರ ತಾಯಿ ರುಬಿಯಾ ಖಾನ್ ಅವರು ಫೆಬ್ರವರಿ ತಿಂಗಳಿನಲ್ಲಿ ಅರ್ಜಿಯೊಂದನ್ನು ಸಲ್ಲಿಸಿದ್ದರು. ಈ ಅರ್ಜಿಯನ್ನು ವಿಚಾರಣೆ ನಡೆಸಿರುವ ನ್ಯಾಯಾಲಯವು ಅರ್ಜಿಯನ್ನು ತಿರಸ್ಕರಿಸಿದೆ ಎಂದು ತಿಳಿದುಬಂದಿದೆ.
2013 ಜೂನ್.3 ರಂದು ನಟಿ ಜಿಯಾ ಖಾನ್, ಜುಹುವಿನಲ್ಲಿರುವ ತಮ್ಮ ಆಪಾರ್ಟ್ ಮೆಂಟ್ ವೊಂದರಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದರು, ಜಿಯಾ ಸಾವಿನ ಸುತ್ತ ಸಾಕಷ್ಟು ಅನುಮಾನಗಳು ವ್ಯಕ್ತವಾಗಿದ್ದವು. ಜಿಯಾ ಸಾವಿಗೆ ಆದಿತ್ಯ ಪಂಚೋಲಿಯವರ ಪುತ್ರ ಸೂರಜ್ ಪಂಚೋಲಿಯೇ ಕಾರಣ ಎಂದು ಈ ಹಿಂದೆ ರುಬಿಯಾ ಖಾನ್ ಆವರು ಆರೋಪಿಸಿದ್ದರು.
Advertisement