ಇಂಡಿಗೊ ವಿಮಾನ
ದೇಶ
ಇಂಡಿಗೊ ವಿಮಾನದ ತುರ್ತು ನಿರ್ಗಮನ ಬಾಗಿಲು ತೆರೆದ ಪ್ರಯಾಣಿಕ, ಓರ್ವನಿಗೆ ಗಾಯ
ಇಂಡಿಗೊ ವಿಮಾನ ಟೇಕ್ ಆಫ್ ಆಗುವ ಕೆಲವೇ ಕ್ಷಣಗಳ ಮುನ್ನ ತುರ್ತು ನಿರ್ಗಮನ ಬಾಗಿಲು ತೆರೆದು ಆತಂಕ ಸೃಷ್ಟಿಸಿದ ವಿಮಾನದ....
ಮುಂಬೈ: ಇಂಡಿಗೊ ವಿಮಾನ ಟೇಕ್ ಆಫ್ ಆಗುವ ಕೆಲವೇ ಕ್ಷಣಗಳ ಮುನ್ನ ತುರ್ತು ನಿರ್ಗಮನ ಬಾಗಿಲು ತೆರೆದು ಆತಂಕ ಸೃಷ್ಟಿಸಿದ ವಿಮಾನದ ಪ್ರಯಾಣಿಕನನ್ನು ಮುಂಬೈ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಬಂಧಿಸಲಾಗಿದೆ.
ಮುಂಬೈ- ಚಂಡಿಗಢ ವಿಮಾನದಲ್ಲಿ ಭದ್ರತಾ ನಿಯಮ ಉಲ್ಲಂಘಿಸಿ ತುರ್ತು ಬಾಗಿಲು ತೆರೆದ ಆರೋಪಿ ಪ್ರಯಾಣಿಕನನ್ನು ವಶಕ್ಕೆ ಪಡೆದಿರುವ ಸಿಐಎಸ್ಎಫ್ ಸಿಬ್ಬಂದಿ, ಆತನ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.
ಇಂದು ಬೆಳಗ್ಗೆ 11 ಗಂಟೆಯ ಸುಮಾರಿಗೆ ಮುಂಬೈನಿಂದ ಚಂಡಿಗಢಕ್ಕೆ ತೆರಳುತ್ತಿದ್ದ 6ಇ 4134 ಇಂಡಿಗೊ ವಿಮಾನ ರನ್ ವೇನಲ್ಲಿದ್ದಾಗ 12-ಸಿ ಸೀಟ್ ನಲ್ಲಿ ಕುಳಿತಿದ್ದ ಪ್ರಯಾಣಿಕನೊಬ್ಬ ಕೂಡಲೇ ತುರ್ತು ನಿರ್ಗಮನ ದ್ವಾರವನ್ನು ತೆರೆದಿದ್ದಾರೆ. ಇದರ ಪರಿಣಾಮ ಆತನ ಹಿಂಬದಿ ಸೀಟ್ ನಲ್ಲಿ ಕುಳಿತಿದ್ದ ಸಹ ಪ್ರಯಾಣಿಕರೊಬ್ಬರು ಗಾಯಗೊಂಡಿದ್ದು, ಅವರಿಗೆ ವಿಮಾನದಲ್ಲೇ ಪ್ರಥಮ ಚಿಕಿತ್ಸೆ ನೀಡಲಾಗಿದೆ.
ಪ್ರಯಾಣಿಕನ ಈ ಆವಾಂತರದಿಂದಾಗಿ ವಿಮಾನ ಸುಮಾರು ಎರಡು ಗಂಟೆಗಳ ತಡವಾಗಿ ಟೇಕ್ ಆಫ್ ಆಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ