ಆ್ಯಂಬುಲೆನ್ಸ್ ಸೇವೆ ನಿರ್ಲಕ್ಷ್ಯ: ಮರದ ಕೆಳಗೆ ಮಗುವಿಗೆ ಜನ್ಮ ನೀಡಿದ ಮಹಿಳೆ

ಆ್ಯಂಬುಲೆನ್ಸ್ ಸೇವೆ ನಿರ್ಲಕ್ಷ್ಯದಿಂದಾಗಿ ಮಹಿಳೆಯೊಬ್ಬರು ರಸ್ತೆ ಪಕ್ಕದ ಮರದಡಿ ಮಗುವಿಗೆ ಜನ್ಮ ನೀಡಿದ್ದಾರೆ...
ಮರದ ಕೆಳಗೆ ಮಗುವಿಗೆ ಜನ್ಮ ನೀಡಿದ ಮಹಿಳೆ
ಮರದ ಕೆಳಗೆ ಮಗುವಿಗೆ ಜನ್ಮ ನೀಡಿದ ಮಹಿಳೆ
ರಾಯಘಡ: ಆ್ಯಂಬುಲೆನ್ಸ್ ಸೇವೆ ನಿರ್ಲಕ್ಷ್ಯದಿಂದಾಗಿ ಮಹಿಳೆಯೊಬ್ಬರು ರಸ್ತೆ ಪಕ್ಕದ ಮರದಡಿ ಮಗುವಿಗೆ ಜನ್ಮ ನೀಡಿದ್ದಾರೆ. 
ಕಲ್ಯಾಣ ಸಿಂಗಾಪುರ್ ನ ಸಿಖರಾಪೈ ಪಂಚಾಯತ್ ವ್ಯಾಪ್ತಿಯ ಉಪ್ಪಾರಸಜಾ ಗ್ರಾಮದ ಮಹಿಳೆ 25 ವರ್ಷದ ಲಕ್ಷ್ಮಿ ಕುಲೆಸಿಕ ಎಂಬುವರು ನಡುರಸ್ತೆಯಲ್ಲೇ ಮಗುವಿಗೆ ಜನ್ಮ ನೀಡಿದ್ದಾರೆ. 
ಗುರುವಾರ ರಾತ್ರಿ ಲಕ್ಷ್ಮಿ ಅವರಿಗೆ ಹೊಟ್ಟೆ ನೋವು ಕಾಣಿಸಿಕೊಂಡಿದ್ದು, ಕುಟುಂಬಸ್ಥರು ಕೂಡಲೇ ಆಶಾ ಕಾರ್ಯಕರ್ತರಿಗೆ ಕರೆ ಮಾಡಿದರು. ಬಳಿಕ ಸ್ಥಳಕ್ಕೆ ಬಂದ ಆಶಾ ಕಾರ್ಯಕರ್ತರು 108 ಮತ್ತು 102 ಆ್ಯಂಬುಲೆನ್ಸ್ ಸೇವೆಗೆ ಕರೆ ಮಾಡಿದರು. ಆದರೆ ಅಲ್ಲಿಂದ ಯಾವುದೇ ರೀತಿಯ ಪ್ರತಿಕ್ರಿಯೆ ಬರದಿದ್ದರಿಂದ ಗರ್ಭಿಣಿ ಮಹಿಳೆಯನ್ನು ಸುಮಾರು 4 ಕಿ.ಮೀ ದೂರ ಹೊತ್ಯೊಯ್ದಿದ್ದು ರಸ್ತೆ ಮಧ್ಯೆ ಆಕೆ ಮಗುವಿಗೆ ಜನ್ಮ ನೀಡಿದ್ದಾರೆ. 
ಮಗುವಿಗೆ ಜನ್ಮ ನೀಡಿದ ಬಳಿಕ ಲಕ್ಷ್ಮಿಯನ್ನು ಆಟೋರಿಕ್ಷಾದಲ್ಲಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ತಾಯಿ ಮಗು ಆರೋಗ್ಯವಾಗಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com