ಮಹಿಳೆಯರಿಗೆ ಗರ್ಭಧಾರಣೆಯನ್ನು ನಿರ್ಧರಿಸುವ ಹಕ್ಕಿದೆ: ಸುಪ್ರೀಂ ಕೋರ್ಟ್ ನ್ಯಾಯಾಧೀಶರು

ಮಗು ಪಡೆಯುವುದು, ಗರ್ಭ ಧರಿಸುವುದು ಅಥವಾ ಗರ್ಭಪಾತ ಮಾಡಿಸಿಕೊಳ್ಳುವುದು ಮಹಿಳೆಯರ...
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್
ನವದೆಹಲಿ: ಮಗು ಪಡೆಯುವುದು, ಗರ್ಭ ಧರಿಸುವುದು ಅಥವಾ ಗರ್ಭಪಾತ ಮಾಡಿಸಿಕೊಳ್ಳುವುದು ಮಹಿಳೆಯರ ಆಯ್ಕೆಯಾಗಿದ್ದು ಅದು ಅವರ ಹಕ್ಕು ಎಂದು ಸುಪ್ರೀಂ ಕೋರ್ಟ್ ನ ನ್ಯಾಯಾಧೀಶರು ಹೇಳಿದ್ದಾರೆ.
ಮಹಿಳೆಯರ ಸಂತಾನೋತ್ಪತ್ತಿ ಹಕ್ಕು ಮತ್ತು ಪುರುಷರ ಪ್ರಬಲ ಪಾತ್ರ ಮತ್ತು ಕುಟುಂಬದವರು ಮಹಿಳೆ ಮೇಲೆ ಹೇರುವ ಒತ್ತಡದ ಕುರಿತು ತೀರ್ಪು ನೀಡಿದ ಸುಪ್ರೀಂ ಕೋರ್ಟ್ ನ್ಯಾಯಾಧೀಶ ಎ.ಕೆ.ಸಿಕ್ರಿ, ಮಹಿಳೆಯರ ಸಂತಾನೋತ್ಪತ್ತಿ ವಿಷಯ ಬಂದಾಗ ಹಲವು ಸಂದರ್ಭಗಳಲ್ಲಿ ಮಹಿಳೆಗೆ ತನ್ನ ಅಭಿಪ್ರಾಯ ಮಂಡಿಸಲು ಅವಕಾಶಗಳೇ ಇರುವುದಿಲ್ಲ. ಈ ಸಮಾಜದಲ್ಲಿ ಮಾನವೀಯತೆಯೇ ಇಲ್ಲವೇನೋ ಎನಿಸುತ್ತದೆ. 21ನೇ ಶತಮಾನದ ಇಂದಿನ ಕಾಲಘಟ್ಟದಲ್ಲಿ ತಂತ್ರಜ್ಞಾನ ಇಷ್ಟು ಸುಧಾರಿಸಿದ್ದರೂ ಕೂಡ ಮಹಿಳೆಯರಿಗೆ ಆಯ್ಕೆಯ ಸ್ವಾತಂತ್ರ್ಯಗಳಿರುವುದಿಲ್ಲ. ಇದು ವಾಸ್ತವ ಎಂದು ಹೇಳಿದರು.
ಜಿಂದಾಲ್ ಗ್ಲೋಬಲ್ ವಿಶ್ವವಿದ್ಯಾಲಯ ಆಯೋಜಿಸಿದ್ದ ಚರ್ಚಾ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ನ್ಯಾಯಮೂರ್ತಿ ಸಿಕ್ರಿ, ಸಂತಾನೋತ್ಪತ್ತಿ ಹಕ್ಕು ಮಾನವನ ಹಕ್ಕಾಗಿದೆ. ಅದು ಮನುಷ್ಯನ ಘನತೆಯನ್ನು ಆಧರಿಸಿದೆ. ಸಂತಾನೋತ್ಪತ್ತಿ ಹಕ್ಕು ವಿಷಯ ಬಂದಾಗ ಮಹಿಳೆಯ ಹಕ್ಕು ಕೂಡ ಅಲ್ಲಿ ಸೇರಿರುತ್ತದೆ. ಅದು ಲೈಂಗಿಕ ಹಕ್ಕು. ಭಾರತದಲ್ಲಿನ ಸಂತಾನೋತ್ಪತ್ತಿ ಹಕ್ಕಿನ ವಿಷಯದಲ್ಲಿ ಇಲ್ಲಿ ಗಂಡನ ಆಯ್ಕೆ ಅಥವಾ ಹಿರಿಯರು ಹೇಳುವುದು ಮುಖ್ಯವಾಗುತ್ತದೆ. ಮಗುವಾಗಬೇಕೆ, ಅದು ಗಂಡು ಮಗುವೇ ಅಥವಾ ಹೆಣ್ಣು ಮಗುವೇ ಎಂಬುದನ್ನು ಕೂಡ ಗಂಡ ಮತ್ತು ಗಂಡನ ಮನೆಯವರು ನಿರ್ಧರಿಸುತ್ತಾರೆ. ಹೆಣ್ಣು ಭ್ರೂಣಹತ್ಯೆ ಮತ್ತು ಕುಟುಂಬದಲ್ಲಿ ಪುರುಷ ಪ್ರಧಾನ ಸಮಾಜದ ಬಗ್ಗೆಯೂ ನ್ಯಾಯಾಧೀಶ ಅಸಮಾಧಾನ ವ್ಯಕ್ತಪಡಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com