ಉತ್ತರಾಖಂಡದ ರುದ್ರ ಪ್ರಯಾಗದಲ್ಲಿ ಮತ್ತೊಂದು ಭೂಕಂಪ

ಉತ್ತರಾಖಂಡದ ರುದ್ರ ಪ್ರಯಾಗದಲ್ಲಿ ಲಘು ಭೂಕಂಪನವಾಗಿದೆ. ಕಳೆದ ಒಂದು ವಾರದಲ್ಲಿ ಮೂರನೇ ಬಾರಿಗೆ ಭೂಕಂಪ ..
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ನವದೆಹಲಿ: ಉತ್ತರಾಖಂಡದ ರುದ್ರ ಪ್ರಯಾಗದಲ್ಲಿ ಲಘು ಭೂಕಂಪನವಾಗಿದೆ. ಕಳೆದ ಒಂದು ವಾರದಲ್ಲಿ ಮೂರನೇ ಬಾರಿಗೆ ಭೂಕಂಪ ಸಂಭವಿಸಿದೆ.

ರಿಕ್ಟರ್ ಮಾಪಕದಲ್ಲಿ 3.2 ರಷ್ಟು ತೀವ್ರತೆಯ ಕಂಪನವಾಗಿದೆ ಎಂದು ಭೂ ವಿಜ್ಞಾನ ಇಲಾಖೆ ತಿಳಿಸಿದೆ.ರಾತ್ರಿ ಸುಮಾರು 10.51 ರ ಸುಮಾರಿಗೆ ಭೂಕಂಪನ ವಾಗಿದ್ದು. 5 ಕಿಮೀ ಆಳದಲ್ಲಿ ಕಂಪನವಾಗಿದೆ ಎಂದು ಇಲಾಖೆ ಹೇಳಿದೆ. ಅದೃಷ್ಟವಶಾತ್ ಯಾವುದೇ ಹಾನಿಯಾಗಿರುವ ವರದಿಯಾಗಿಲ್ಲ,

ಫೆಬ್ರವರಿ 6 ಮತ್ತು 7 ರಂದು 5.8 ಹಾಗೂ 3.6 ರಷ್ಟು ತೀವ್ರತೆಯ ಭೂಕಂಪವಾಗಿತ್ತು. ಹರ್ಯಾಣ, ಪಂಜಾಬ್, ಉತ್ತರಪ್ರದೇಶ, ಹಿಮಾಚಲಪ್ರದೇಶ, ಎನ್ ಸಿಆರ್ ಪ್ರದೇಶಗಳಲ್ಲಿ ಭೂ ಕಂಪನದ ಅನುಭವವಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com