ಮೇಘಾಲಯದಲ್ಲಿ ಲಘು ಭೂಕಂಪ, 4.5 ತೀವ್ರತೆ ದಾಖಲು

ಉತ್ತರ ಭಾರತದಲ್ಲಿ ಭೂಕಂಪ ಸಂಭವಿಸಿದ ಬೆನ್ನಲ್ಲೇ ಈಶಾನ್ಯ ರಾಜ್ಯ ಮೇಘಾಲಯದಲ್ಲಿಯೂ ಭೂಕಂಪ ಸಂಭವಿಸಿದೆ.
ಮೇಘಾಲಯದಲ್ಲಿ ಲಘು ಭೂಕಂಪ
ಮೇಘಾಲಯದಲ್ಲಿ ಲಘು ಭೂಕಂಪ
Updated on: 
ಶಿಲ್ಲಾಂಗ್: ಉತ್ತರ ಭಾರತದಲ್ಲಿ ಭೂಕಂಪ ಸಂಭವಿಸಿದ ಬೆನ್ನಲ್ಲೇ ಈಶಾನ್ಯ ರಾಜ್ಯ ಮೇಘಾಲಯದಲ್ಲಿಯೂ ಭೂಕಂಪ ಸಂಭವಿಸಿದೆ. 
ಬೆಳಿಗ್ಗೆ 9.35 ಕ್ಕೆ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 4.5 ತೀವ್ರತೆ ದಾಖಲಾಗಿದ್ದು, ಭೂಕಂಪದ ಕೇಂದ್ರ ಬಿಂದು ಮೇಘಾಲಯದ ಗಾರೋ ಹಿಲ್ಸ್ ನಲ್ಲಿ ಪತ್ತೆಯಾಗಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಅದೃಷ್ಟವಶಾತ್ ಅವಗಢಗಳು ಸಂಭವಿಸಿರುವುದರ ಬಗ್ಗೆ ಈ ವರೆಗೂ ಯಾವುದೇ ವರದಿಯಾಗಿಲ್ಲ. 
ಈಶಾನ್ಯ ರಾಜ್ಯಗಳಾದ ಮೇಘಾಲಯ, ಅಸ್ಸಾಂ, ಮಿಜೊರಾಮ್, ತ್ರಿಪುರಾ, ನಾಗಾಲ್ಯಾಂಡ್, ಅರುಣಾಚಲ ಪ್ರದೇಶ ಹಾಗು ಮಣಿಪುರ ಇವುಗಳನ್ನು ವಿಶ್ವದ ಪ್ರಮುಖ ಭೂಕಂಪ ಪೀಡಿತ ಪ್ರದೇಶಗಳೆಂದು ಗುರುತಿಸಲಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com