ನವದೆಹಲಿ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವೆಬ್ ಸೈಟ್ ನಲ್ಲಿ ಸೈಬರ್ ಭದ್ರತೆಯ ಕೊರತೆಗಳಿರುತ್ತವೆ ಎಂದು ಕೆಲ ದಿನಗಳ ಹಿಂದೆ ವರದಿಯಾಗಿದ್ದು, ಇದೀಗ ಕೇಂದ್ರ ಗೃಹ ಸಚಿವಾಲಯದ ವೆಬ್ ಸೈಟ್ ಹ್ಯಾಕ್ ಆಗಿದೆ.
ಪ್ರಕರಣ ಇಂದು ಬೆಳಗ್ಗೆ ಬೆಳಕಿಗೆ ಬಂದಿದ್ದು, ಗೊತ್ತಾದ ತಕ್ಷಣ ವೆಬ್ ಸೈಟ್ ನ್ನು ರಾಷ್ಟ್ರೀಯ ಮಾಹಿತಿ ಕೇಂದ್ರ ಬ್ಲಾಕ್ ಮಾಡಿದೆ. ಕಂಪ್ಯೂಟರ್ ತುರ್ತು ಪಡೆ ತಂಡ ಘಟನೆ ಬಗ್ಗೆ ಪರೀಕ್ಷೆ ನಡೆಸುತ್ತಿದೆ.
ಕಳೆದ ತಿಂಗಳು ರಾಷ್ಟ್ರೀಯ ಭದ್ರತಾ ಪಡೆಯ ಅಧಿಕೃತ ವೆಬ್ ಸೈಟ್ ನ್ನು ಪಾಕಿಸ್ತಾನಿ ಮೂಲಕ ನಿರ್ವಾಹಕರು ಹ್ಯಾಕ್ ಮಾಡಿದ್ದು, ಪ್ರಧಾನಿ ಮತ್ತು ಭಾರತ ವಿರೋಧಿ ವಿಷಯ ವಿರುದ್ಧ ಧರ್ಮನಿಂದೆ ಹೊತ್ತ ಸಂದೇಶವನ್ನು ಹಾಕಲಾಗಿತ್ತು.
ಕಳೆದ ವಾರ ಲೋಕಸಭೆಗೆ ಮಾಹಿತಿ ನೀಡಿದ್ದ ಗೃಹ ಸಚಿವಾಲಯ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ 700ಕ್ಕೂ ಹೆಚ್ಚು ವೆಬ್ ಸೈಟ್ ಗಳನ್ನು ಕಳೆದ ನಾಲ್ಕು ವರ್ಷಗಳಲ್ಲಿ ಹ್ಯಾಕ್ ಮಾಡಲಾಗಿದ್ದು, ಈ ಸಂಬಂಧ 8,348 ಮಂದಿಯನ್ನು ಬಂಧಿಸಲಾಗಿದೆ ಎಂದು ವಿವರ ನೀಡಿತ್ತು.