ಸಾಂದರ್ಭಿಕ ಚಿತ್ರ
ದೇಶ
ರಾಜಸ್ತಾನದ ಜೈಸಲ್ಮರ್ ನಲ್ಲಿ ಪಾಕ್ ಗೂಢಚಾರಿಯ ಬಂಧನ
ಭಾರತ-ಪಾಕಿಸ್ತಾನ ಗಡಿಯಲ್ಲಿರುವ ರಾಜಸ್ತಾನದ ಜೈಸಲ್ಮರ್ ನಲ್ಲಿ ಸಿಐಡಿ ಮತ್ತು ಗಡಿ ಗುಪ್ತಚರ...
ಜೈಸಲ್ಮರ್(ರಾಜಸ್ತಾನ): ಭಾರತ-ಪಾಕಿಸ್ತಾನ ಗಡಿಯಲ್ಲಿರುವ ರಾಜಸ್ತಾನದ ಜೈಸಲ್ಮರ್ ನಲ್ಲಿ ಸಿಐಡಿ ಮತ್ತು ಗಡಿ ಗುಪ್ತಚರ ಪೊಲೀಸರು ಪಾಕಿಸ್ತಾನದ ಗೂಢಚಾರಿ ಸಾದಿಕ್ ನನ್ನು ಬಂಧಿಸಿದ್ದಾರೆ.
ಜಂಟಿ ಕಾರ್ಯಾಚರಣೆ ಮುಂದುವರಿದಿದೆ. ಕಳೆದ ವಾರದ ಆರಂಭದಲ್ಲಿ, ರಾಜಸ್ತಾನ ಪೊಲೀಸರು ಜೈಸಲ್ಮರ್ ನಿವಾಸಿಯನ್ನು ಬಂಧಿಸಿದ್ದರು. ಈತ ಪಾಕಿಸ್ತಾನ ಗುಪ್ತಚರ ಸಂಸ್ಥೆಯ ಜೊತೆ ಮಾಹಿತಿ ವಿನಿಮಯ ಮಾಡಿಕೊಳ್ಳುತ್ತಿದ್ದ ಎಂದು ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು.
ಆರೋಪಿ ಸಾದಿಕ್ ನನ್ನು ತನಿಖೆ ನಡೆಸಿದ ಪೊಲೀಸರು ಆತನ ಬಳಿಯಿಂದ ಹಲವು ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಅಧಿಕೃತ ರಹಸ್ಯಗಳ ಕಾಯಿದೆ 1923ರಡಿ ಆತನ ವಿರುದ್ಧ ಕೇಸು ದಾಖಲಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ