'ಲೂಟಿ ಭೂಮಿ' ಹೇಳಿಕೆ:: ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್ ಕಿಡಿ

ಉತ್ತರಾಖಂಡ ರಾಜ್ಯವನ್ನು ಲೂಟಿ ಭೂಮಿ ಎಂದು ಕರೆದಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ವಿರುದ್ಧ ಕಾಂಗ್ರೆಸ್ ಕಿಡಿಕಾರಿದ್ದು, ಲೂಟಿ ನಡೆಯುತ್ತಿದೆ ಎಂಬುದು ಗೊತ್ತಿದ್ದರೂ ಕಳೆದ ಎರಡು ವರ್ಷಗಳಿಂದ ಮೋದಿಯವರೇಕೆ ಕ್ರಮಕೈಗೊಳ್ಳಲಿಲ್ಲ...
ಕಾಂಗ್ರೆಸ್ ವಕ್ತಾರ ಸಂದೀಪ್ ದೀಕ್ಷಿತ್
ಕಾಂಗ್ರೆಸ್ ವಕ್ತಾರ ಸಂದೀಪ್ ದೀಕ್ಷಿತ್

ನವದೆಹಲಿ: ಉತ್ತರಾಖಂಡ ರಾಜ್ಯವನ್ನು ಲೂಟಿ ಭೂಮಿ ಎಂದು ಕರೆದಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ವಿರುದ್ಧ ಕಾಂಗ್ರೆಸ್ ಕಿಡಿಕಾರಿದ್ದು, ಲೂಟಿ ನಡೆಯುತ್ತಿದೆ ಎಂಬುದು ಗೊತ್ತಿದ್ದರೂ ಕಳೆದ ಎರಡು ವರ್ಷಗಳಿಂದ ಮೋದಿಯವರೇಕೆ ಕ್ರಮಕೈಗೊಳ್ಳಲಿಲ್ಲ ಎಂದು ಸೋಮವಾರ ಪ್ರಶ್ನೆ ಹಾಕಿದೆ.

ಈ ಕುರಿತಂತೆ ಮಾತನಾಡಿರುವ ಕಾಂಗ್ರೆಸ್ ವಕ್ತಾರ ಸಂದೀಪ್ ದೀಕ್ಷಿತ್ ಅವರು, ಉತ್ತರಾಖಂಡ ರಾಜ್ಯದಲ್ಲಿ ಲೂಟಿ ನಡೆಯುತ್ತಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ತಿಳಿದಿದ್ದು, ಲೂಟಿ ನಡೆಯುತ್ತಿದೆ ಎಂದು ತಿಳಿದಿದ್ದರೂ ರಾಜ್ಯ ಸರ್ಕಾರದ ವಿರುದ್ಧ ಕ್ರಮವನ್ನೇಕೆ ಕೈಗೊಳ್ಳಲಿಲ್ಲ ಎಂದು ಹೇಳಿದ್ದಾರೆ.

ಹಲವು ದಿನಗಳಿಂದಲೂ ಪ್ರಧಾನಮಂತ್ರಿಗಳು ಕೆಟ್ಟ ಭಾಷೆ ಮಾತನಾಡುತ್ತಿದ್ದಾರೆ. ನೀವೊಬ್ಬ ದೇಶದ ಪ್ರಧಾನಮಂತ್ರಿ. ಕಾಂಗ್ರೆಸ್ ಭ್ರಷ್ಟ ಸರ್ಕಾರವೆಂದು ತಿಳಿದಿದ್ದರೆ, ನಿಮ್ಮ ಬಳಿ ಪೊಲೀಸರು, ಸಿಬಿಐ ಹಾಗೂ ಎಲ್ಲಾ ರೀತಿಯ ಅಧಿಕಾರಿಗಳವೆ. ನಮ್ಮ ವಿರುದ್ಧ ತನಿಖೆ ನಡೆಸಿ.

ಉತ್ತರಾಖಂಡ ರಾಜ್ಯದಲ್ಲಿ ಲೂಟಿ ನಡೆಯುತ್ತಿದೆ ಎಂಬುದು ತಿಳಿದಿದ್ದರೂ ನಮ್ಮ ವಿರುದ್ಧವೇಕೆ ಎರಡೂವರೆ ವರ್ಷಗಳಿಂದಲೂ ಕ್ರಮಕೈಗೊಳ್ಳಲಿಲ್ಲ? ಚುನಾವಣೆ ಬಂದಾಗ ಮಾತ್ರವೇಕೆ ಈ ವಿಚಾರಗಳ ಬಗ್ಗೆ ಮಾತನಾಡುತ್ತೀರಿ? ಇವೆಲ್ಲಾ ರಾಜಕೀಯ ಪಿತೂರಿಗಳಷ್ಟೇ ಎಂದು ತಿಳಿಸಿದ್ದಾರೆ,

ಉತ್ತರಾಖಂಡದಲ್ಲಿ ಇನ್ನು ಕೆಲವೇ ದಿನಗಳಲ್ಲಿ ಚುನಾವಣೆ ಆರಂಭವಾಗುತ್ತಿದ್ದು, ಈ ಹಿನ್ನಲೆಯಲ್ಲಿ ನಿನ್ನೆಯಷ್ಟೇ ಪ್ರಧಾನಮಂತ್ರಿ ನರೇಂದ್ರಮೋದಿಯವರು ಉತ್ತರಾಖಂಡದಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದರು, ಉತ್ತರಾಖಂಡ ರಾಜ್ಯ 'ದೇವಭೂಮಿ'ಯಾಗಿದ್ದು, 'ದೇವಭೂಮಿಯನ್ನು ಲೂಟಿ ಭೂಮಿಯಾಗಿ ಪರಿವರ್ತಿಸಲಾಗುತ್ತಿದೆ' ಎಂದು ಆರೋಪಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com