ಜಯಲಲಿತಾ ಗೆ ಬಂದ ಉಡುಗೊರೆಗಳನ್ನು ಕಾನೂನುೂಬದ್ದ ಆದಾಯ ಎಂದು ಪರಿಗಣಿಸಲಾಗುವುದಿಲ್ಲ: ಸುಪ್ರೀಂಕೋರ್ಟ್

ಜಯಲಲಿತಾ ಅವರ ಹುಟ್ಟುಹಬ್ಬದಂದು ಉಡುಗೊರೆ ರೂಪದಲ್ಲಿ ಬಂದ 2.15 ಕೋಟಿ ಹಣ ಹಾಗೂ ಆಭರಣ, ಸೀರೆ ಮತ್ತು ಫೋಟೋ ಫ್ರೇಮ್ ಗಳನ್ನು ಆದಾಯ ಎಂದು...
ಜಯಲಲಿತಾ
ಜಯಲಲಿತಾ

ನವದೆಹಲಿ: ಜಯಲಲಿತಾ ಅವರ ಹುಟ್ಟುಹಬ್ಬದಂದು ಉಡುಗೊರೆ ರೂಪದಲ್ಲಿ ಬಂದ 2.15 ಕೋಟಿ ಹಣ ಹಾಗೂ ಆಭರಣ, ಸೀರೆ ಮತ್ತು ಫೋಟೋ ಫ್ರೇಮ್ ಗಳನ್ನು ಆದಾಯ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ.

1992 ರಲ್ಲಿ ಜಯಲಲಿತಾ ಮುಖ್ಯಮಂತ್ರಿಯಾಗಿದ್ದಾಗ 2.15 ಕೋಟಿ ರು ನಗದು ಹಾಗೂ 77.52 ಲಕ್ಷ ಮೌಲ್ಯದ ವಿದೇಶಿ ಉಡುಗೊರೆಗಳನ್ನು ಪಡೆದಿದ್ದರು. ಆದರೆ ಅವುಗಳನ್ನು ಕಾನೂನು ಬದ್ದ ಆದಾಯವೆಂದು ಪರಿಗಣಿಸಲು ಆಗುವುದಿಲ್ಲ ಎಂದು ಸುಪ್ರೀಂ ತಿಳಿಸಿದೆ.

ಚಿನ್ನಾಭರಣ, ನಗದು, ರೇಷ್ಮೆ ಸೀರೆ, ಬೆಳ್ಳಿ ವಸ್ತುಗಳು, ಫೋಟೋ ಫ್ರೇಮ್ ಗಳು ಜಯಾ ಅವರಿಗೆ ತಲುಪಿದ್ದವು.  1988ರ  ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ಐಪಿಸಿ ಸೆಕ್ಷನ್ 161 ರಿಂದ 165ಎ ನಂತೆ ಉಡುಗೊರೆಗಳನ್ನು ಸ್ವೀಕರಿಸುವುದು ಹಾಗೂ ಅವುಗಳನ್ನು ತಮ್ಮ ಬಳಿ ಇಟ್ಟುಕೊಳ್ಳುವುದು ಶಿಕ್ಷಾರ್ಹ ಅಪರಾಧ. ಹೀಗಾಗಿ ಜಯಲಲಿತಾ ಅಧಿಕಾರದಲ್ಲಿದ್ದ ಅವಧಿಯಲ್ಲಿ ಯಾವುದೇ ರೂಪದಲ್ಲಿ  ಸ್ವೀಕರಿಸಿದ ಉಡುಗೊರೆಗಳು ಕಾನೂನು ಬದ್ಧ ಆದಾಯವಲ್ಲ ಎಂದು ನ್ಯಾಯಮೂರ್ತಿ ಪಿಸಿ ಘೋಷ್ ಅವರಿದ್ದ ಪೀಠ ಹೇಳಿದೆ.


ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com