ಸರಬ್ಜಿತ್ ಕೊಲೆ ಪ್ರಕರಣ: ಪಾಕಿಸ್ತಾನ ಜೈಲು ಅಧಿಕಾರಿ ವಿರುದ್ಧ ಅರೆಸ್ಟ್ ವಾರೆಂಟ್ ಜಾರಿ

2013ರಲ್ಲಿ ಪಾಕಿಸ್ತಾನ ಜೈಲಿನಲ್ಲಿ ನಡೆದಿದ್ದ ಭಾರತೀಯ ಪ್ರಜೆ ಸರಬ್ಜಿತ್ ಸಿಂಗ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನ ಜೈಲು ಅಧಿಕಾರಿಯೊಬ್ಬರಿಗೆ ಪಾಕಿಸ್ತಾನ ನ್ಯಾಯಾಲಯ ಜಾಮೀನು ಸಹಿತ ಅರೆಸ್ಟ್ ವಾರೆಂಟ್ ಜಾರಿ...
ಸರಬ್ಜಿತ್ ಸಿಂಗ್
ಸರಬ್ಜಿತ್ ಸಿಂಗ್

ಲಾಹೋರ್: 2013ರಲ್ಲಿ ಪಾಕಿಸ್ತಾನ ಜೈಲಿನಲ್ಲಿ ನಡೆದಿದ್ದ ಭಾರತೀಯ ಪ್ರಜೆ ಸರಬ್ಜಿತ್ ಸಿಂಗ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನ ಜೈಲು ಅಧಿಕಾರಿಯೊಬ್ಬರಿಗೆ ಪಾಕಿಸ್ತಾನ ನ್ಯಾಯಾಲಯ ಜಾಮೀನು ಸಹಿತ ಅರೆಸ್ಟ್ ವಾರೆಂಟ್ ಜಾರಿ ಮಾಡಿದೆ ಎಂದು ಬುಧವಾರ ತಿಳಿದುಬಂದಿದೆ.

ಪಾಕಿಸ್ತಾನದ ಕೋಟ್ ಲಖಪತ್ ಜೈಲಿನಲ್ಲಿ ಭಾರತೀಯ ಪ್ರಜೆ ಸರಬ್ಜಿತ್ ಸಿಂಗ್ ನನ್ನು ಇಬ್ಬರು ಸಹ ಕೈದಿಗಳು ಹತ್ಯೆ ಮಾಡಿದ್ದರು. ಸರಬ್ಜಿತ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ನ್ಯಾಯಾಲಯ ಜೈಲಾಧಿಕಾರಿಗೆ ಪದೇ ಪದೇ ಸಮನ್ಸ್ ಜಾರಿ ಮಾಡಿದ್ದರು. ಅಧಿಕಾರಿ ಹಾಜರಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಇಂದು ವಿಚಾರಣೆ ನಡೆಸಿರುವ ನ್ಯಾಯಾಲಯ ಅಧಿಕಾರಿಗಳಿಗೆ ಬಂಧನ ವಾರೆಂಟ್ ಜಾರಿ ಮಾಡಿದೆ.

ಅಲ್ಲದೆ. ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ಫೆಬ್ರವರಿ 17 ರಂದು ಜೈಲು ಅಧಿಕಾರಿಯಾಗಿರುವ ಡಿವೈಎಸ್ ಪಿ ನ್ಯಾಯಾಲಯಕ್ಕೆ ಹಾಜರಾಗುವಂತೆ ನೋಡಿಕೊಳ್ಳಬೇಕೆಂದು ಲಾಹೋರ್ ಪೊಲೀಸ್ ಮುಖ್ಯಸ್ಥರಿಗೆ ನೋಟಿಸ್ ಜಾರಿ ಮಾಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com