ಕಾರಿಗೆ 2000 ರೂ. ನೋಟಿನಿಂದ ಅಲಂಕಾರ
ದೇಶ
ಕಾರಿಗೆ 2000 ರೂ. ನೋಟಿನಿಂದ ಅಲಂಕಾರ; ಇಲ್ಲಿದೇ ಅಸಲಿ ಸಂಗತಿ!
ಕಾರಿಗೆ 2000 ನೋಟುಗಳನ್ನು ಅಂಟಿಸಿ ಅಲಂಕರಿಸಿದ್ದ ಪ್ರಕರಣಕ್ಕೆ ಪ್ರೇಮಿಗಳ ದಿನಾಚರಣೆ ತಳುಕು ಹಾಕಿಕೊಂಡಿತ್ತು. ಆದರೆ ಘಟನೆಗೆ ಸಂಬಂಧಿಸಿದ ಅಸಲಿಯತ್ತೇ ಬೇರೆ ಇದೆ ಎಂಬುದು ಈಗ ಬಹಿರಂಗವಾಗಿದೆ.
ನವದೆಹಲಿ: ಕಾರಿಗೆ 2000 ನೋಟುಗಳನ್ನು ಅಂಟಿಸಿ ಅಲಂಕರಿಸಿದ್ದ ಪ್ರಕರಣಕ್ಕೆ ಪ್ರೇಮಿಗಳ ದಿನಾಚರಣೆ ತಳುಕು ಹಾಕಿಕೊಂಡಿತ್ತು. ಆದರೆ ಘಟನೆಗೆ ಸಂಬಂಧಿಸಿದ ಅಸಲಿಯತ್ತೇ ಬೇರೆ ಇದೆ ಎಂಬುದು ಈಗ ಬಹಿರಂಗವಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ 2000 ನೋಟುಗಳನ್ನು ಅಂಟಿಸಿ ಅಲಂಕರಿಸಿದ್ದ ಕಾರಿನ ಚಿತ್ರ ವೈರಲ್ ಆಗಿತ್ತು. ಆದರೆ ಅದನ್ನು ಪ್ರೇಮಿಗಳ ದಿನಾಚರಣೆಗಾಗಿ ಅಲಂಕರಿಸಿರಲಿಲ್ಲ. ಕಾರುಗಳನ್ನು ಬಾಡಿಗೆ ನೀಡುವ ಜೂಮ್ ಕಾರ್ ಸಂಸ್ಥೆಯ ಪ್ರಮೋಷನ್ ಗಾಗಿ ಆ ಕಾರನ್ನು 2000 ರೂ ನೋಟುಗಳಿಂದ ಅಲಂಕಾರ ಮಾಡಲಾಗುತ್ತು ಎಂಬುದು ಅಸಲಿ ವಿಷಯ.
ಕ್ಯಾಶ್ ಲವ್ ಹೆಸರಿನ ಅಭಿಯಾನಕ್ಕಾಗಿ ಹೋಂಡಾ ಸಿಟಿ ಕಾರನ್ನು 2000 ರೂ ನೋಟಿನಿಂದ ಅಲಂಕರಿಸಲಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಕಾರನ್ನು ಅಲಂಕಾರಗೊಳಿಸಿದ್ದ ಪ್ರೇಮಿಯ ಬಂಧನದ ವಿಷಯ ವೈರಲ್ ಆಗುತ್ತಿದ್ದಂತೆಯೇ ಸ್ಪಷ್ಟನೆ ನೀಡಿರುವ ಜೂಮ್ ಕಾರ್ ಸಂಸ್ಥೆ. "ಹೊಸ ಕಾರುಗಳ ಇಎಂಐ ನಲ್ಲಿ ಶೇ.70 ರಷ್ಟು ಉಳಿತಾಯ ಮಾಡಬಹುದು ಎಂಬ ಸಂದೇಶ ನೀಡಲು ಕ್ಯಾಶ್ ಲವ್ ಅಭಿಯಾನ ಹಮ್ಮಿಕೊಂಡಿದ್ದೆವು, ಇದಕ್ಕಾಗಿ ಹೋಂಡಾ ಸಿಟಿ ಕಾರನ್ನು 2000 ರೂ ನೋಟಿನಿಂದ ಅಲಂಕರಿಸಲಾಗಿತ್ತು. ಆದರೆ ಇದನ್ನು ಸಾಮಾಜಿಕ ಜಾಲತಾಣದಲ್ಲಿ ತಪ್ಪಾಗಿ ಪ್ರಕಟಿಸಲಾಗಿದೆ ಎಂದು ಸ್ಪಷ್ಟನೆ ನೀಡಿದೆ.
ಪ್ರೇಮ ನಿವೇದನೆಗಾಗಿ ಕಾರಿಗೆ 2000 ನೋಟುಗಳನ್ನು ಅಂಟಿಸಿ ಅಲಂಕರಿಸಿದ್ದ ಪ್ರೇಮಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ ಎಂಬ ಸುದ್ದಿ ವೈರಲ್ ಆಗಿತ್ತು.

