ಬಾಂಗ್ಲಾ ಯುದ್ಧ ಹಿರೋ, ಕಲಾವಿದ ಶಹಾಬುದ್ದೀನ್ ಅಹ್ಮದ್ ಗೆ ರಾಷ್ಟ್ರಪತಿ ಭವನದ ಆತಿಥ್ಯ

ಬಾಂಗ್ಲಾದೇಶದ ಯುದ್ಧ ಹಿರೋ ಖ್ಯಾತ ಚಿತ್ರಕಲಾವಿದ ಶಹಾಬುದ್ದೀನ್ ಅಹ್ಮದ್ ಫೆ.18 ರಿಂದ 2 ದಿನಗಳ ಕಾಲ ರಾಷ್ಟ್ರಪತಿ ಭವನದಲ್ಲಿ ತಂಗಲಿದ್ದಾರೆ.
ಶಹಾಬುದ್ದೀನ್ ಅಹ್ಮದ್
ಶಹಾಬುದ್ದೀನ್ ಅಹ್ಮದ್
ನವದೆಹಲಿ: ಬಾಂಗ್ಲಾದೇಶದ ಯುದ್ಧ ಹಿರೋ ಖ್ಯಾತ ಚಿತ್ರಕಲಾವಿದ ಶಹಾಬುದ್ದೀನ್ ಅಹ್ಮದ್ ಫೆ.18 ರಿಂದ 2 ದಿನಗಳ ಕಾಲ ರಾಷ್ಟ್ರಪತಿ ಭವನದಲ್ಲಿ ತಂಗಲಿದ್ದಾರೆ. 
2 ದಿನಗಳ ಅವಧಿಯಲ್ಲಿ ಶಹಾಬುದ್ದೀನ್ ಅಹ್ಮದ್ ಅವರ ಚಿತ್ರಕಲೆಯ ಪ್ರದರ್ಶನ ನಡೆಯಲಿದ್ದು, ಇನ್-ರೆಸಿಡೆನ್ಸ್ ಯೋಜನೆಯ ಭಾಗವಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ರಾಷ್ಟ್ರಪತಿ ಭವನದ ಪ್ರಕಟಣೆ ತಿಳಿಸಿದೆ. 
ಕಳೆದ 4 ದಶಕಗಳಿಂದ ಪ್ಯಾರಿಸ್ ನಲ್ಲಿ ನೆಲೆಸಿರುವ ಶಹಾಬುದ್ದೀನ್ ಅಹ್ಮದ್ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಅತಿಥಿಯಾಗಿರಲಿದ್ದಾರೆ. 
ಕಲಾವಿದರ ಪ್ರತಿಭೆಯನ್ನು ಉತ್ತೇಜಿಸಲು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಇನ್-ರೆಸಿಡೆನ್ಸ್ ಯೋಜನೆಯನ್ನು 2013 ರ ಡಿ.11 ರಂದು ಜಾರಿಗೆ ತಂದಿದ್ದರು. ಈ ವರೆಗೂ ಜಯಶ್ರೀ ಬುರ್ಮಾನ್, ರಾಜ್ಯಸಭಾ ಸಂಸದ ಎಂಪಿ ಕಲಾವಿದ ಜೋಗೆನ್ ಚೌಧರಿ, ಪರೇಶ್ ಮೇಟಿ ಅವರು ಈ ವರೆಗೂ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಆತಿಥ್ಯ ಸ್ವೀಕರಿಸಿದ್ದಾರೆ. 
ಕೋಲ್ಕತಾ ಮೂಲದ ಗಂಗಾ ಆರ್ಟ್ ಗ್ಯಾಲರಿ ಹಾಗೂ ರಾಷ್ಟ್ರಪತಿ ಭವನದ ಸಹಯೋಗದಲ್ಲಿ ಅಹ್ಮದ್ ಅವರ ಚಿತ್ರಕಲೆಗಳ ಪ್ರದರ್ಶನ ನಡೆಯಲಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com