ವಿದ್ಯುತ್ ದರ ಹೆಚ್ಚಳ: ರೈತರಿಗಾಗಿ ಹೆಚ್ಚುವರಿ ಮೊತ್ತ ಭರಿಸಲಿರುವ ರಾಜಸ್ಥಾನ ಸರ್ಕಾರ

ವಿದ್ಯುತ್ ದರ ಹೆಚ್ಚಳದಿಂದಾಗಿ ರೈತರ ಮೇಲೆ ಹೊರೆ ಬೀಳುವುದನ್ನು ತಪ್ಪಿಸುವುದಕ್ಕಾಗಿ ಹೆಚ್ಚುವರಿ ಮೊತ್ತ ಭರಿಸಲು ರಾಜಸ್ಥಾನ ಸರ್ಕಾರ ತೀರ್ಮಾನಿಸಿದೆ.
ವಿದ್ಯುತ್ ದರ ಹೆಚ್ಚಳ
ವಿದ್ಯುತ್ ದರ ಹೆಚ್ಚಳ
ಜೈಪುರ: ವಿದ್ಯುತ್ ದರ ಹೆಚ್ಚಳದಿಂದಾಗಿ ರೈತರ ಮೇಲೆ ಹೊರೆ ಬೀಳುವುದನ್ನು ತಪ್ಪಿಸುವುದಕ್ಕಾಗಿ ಹೆಚ್ಚುವರಿ ಮೊತ್ತ ಭರಿಸಲು ರಾಜಸ್ಥಾನ ಸರ್ಕಾರ ತೀರ್ಮಾನಿಸಿದೆ.
ರಾಜಸ್ಥಾನ ವಿದ್ಯುತ್ ನಿಯಂತ್ರಣ ಆಯೋಗ ಸೆ.1 ರಿಂದ ವಿದ್ಯುತ್ ದರ ಹೆಚ್ಚಿಸಿದೆ. ವಿದ್ಯುತ್ ದರ ಹೆಚ್ಚಳದಿಂದ ರೈತರಿಗೆ ಹೆಚ್ಚಿನ ಹೊರೆಯಾಗಲಿದೆ. ಆದರೆ ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಹೆಚ್ಚಿನ ಮೊತ್ತ ಭರಿಸಲು ನಿರ್ಧರಿಸಿದ್ದು, ರಾಜ್ಯ ಸರ್ಕಾರದ ಮೇಲೆ 500 ಕೋಟಿ ರೂಪಾಯಿ ಹೆಚ್ಚುವರಿ ಹೊರೆ ಬೀಳಲಿದೆ. 
ವಿದ್ಯುತ್ ದರ ಹೆಚ್ಚಳದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದ ರೈತರು ವಿಧಾನಸಭೆ ಬಜೆಟ್ ಅಧಿವೇಶನದ ವೇಳೆಯಲ್ಲಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಇಂಧನ ಸಚಿವ ಪುಷ್ಪೇಂದ್ರ ಸಿಂಗ್ ರೈತರಿಗೆ ಮಾತ್ರ ವಿದ್ಯುತ್ ದರ ಹೆಚ್ಚಳವನ್ನು ವಾಪಸ್ ಪಡೆದಿದ್ದು, ಹೆಚ್ಚಿನ ಹೊರೆಯನ್ನು ಸರ್ಕಾರವೇ ಭರಿಸಲಿದೆ ಎಂದು ಸ್ಪಷ್ಟಪಡಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com