

ಥಾಣೆ: ಖ್ಯಾತ ಸಮಾಜ ಸೇವಕ ಹಾಗೂ ಆರ್'ಎಸ್ಎಸ್ ಹಿರಿಯ ಕಾರ್ಯಕರ್ತ ಶತಾಯುಷಿ ಗಂಗಾದಯಾಳ್ ಅವಸ್ಥಿಯವರು ಶುಕ್ರವಾರ ವಿಧಿವಶರಾಗಿದ್ದಾರೆಂದು ತಿಳಿದುಬಂದಿದೆ.
ಶತಾಯುಷಿಯಾಗಿದ್ದ ಗಂಗಾದಯಾಳ್ ಅವಸ್ತಿಯವರು ಕಳೆದ ರಾತ್ರಿ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.
ಉತ್ತರಪ್ರದೇಶದ ಮೂಲದವರಾಗಿದ್ದ ಅವಸ್ಥಿಯವರು ಸುಮಾರು 30 ವರ್ಷಗಳ ಹಿಂದೆ ಥಾಣೆಗೆ ವಲಸೆ ಬಂದಿದ್ದರು. ಆರ್'ಎಸ್ಎಸ್ ಹಿರಿಯ ನಾಯಕರಾದ ಗುರು ಗೋಲ್ವಾಲ್ಕರ್, ಶ್ಯಾಮ್ ಪ್ರಸಾದ್ ಮುಖರ್ಜಿ, ದೀನದಯಾಳ್ ಉಪಾಧ್ಯಾಯ ಮತ್ತು ಅಟಲ್ ಬಿಹಾರಿ ವಾಜಪೇಯಿ ಸೇರಿದಂತೆ ಹಲವು ನಾಯಕರಿಗೆ ನಿಕಟ ವ್ಯಕ್ತಿಯಾಗಿದ್ದರು.
ಇತ್ತೀಚೆಗಷ್ಟೇ ಅವಸ್ಥಿಯವರನ್ನು ಕಾಶೀ ಸುಮೇರು ಪೀಠದ ಜಗದ್ಗುರು ಶಂಕರಾಚಾರ್ಯ ಸ್ವಾಮಿ ನರೇಂದ್ರಾನಂದ ಸರಸ್ವತಿ ಅವರಿಂದ ಸಮ್ಮಾನಿತರಾಗಿದ್ದರು.