ಕೇಜ್ರಿವಾಲ್ ಬಳಿಕ ತಿಂಗಳ ವೇತನವನ್ನು ಶರ್ಮಿಳಾ ಪಕ್ಷಕ್ಕೆ ದೇಣಿಗೆಯಾಗಿ ನೀಡಿದ ಭಗವಂತ್ ಮನ್

ಉಕ್ಕಿನ ಮಹಿಳೆ ಎಂದೇ ಖ್ಯಾತಿ ಪಡೆದಿರುವ ಮಾನವ ಹಕ್ಕುಗಳ ಹೋರಾಗಾರ್ತಿ ಇರೋಮ್ ಶರ್ಮಿಳಾ ಅವರು ರಚಿಸಿರುವ ನೂತನ ಪಕ್ಷಕ್ಕೆ ದೇಣಿಗಗಳು ಹರಿದುಬರುತ್ತಿದ್ದು, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಬಳಿಕ ಆಪ್ ಸಂಸದ ಭಗವಂತ್ ಮನ್...
ಆಪ್ ಸಂಸದ ಭಗವಂತ್ ಮನ್
ಆಪ್ ಸಂಸದ ಭಗವಂತ್ ಮನ್

ನವದೆಹಲಿ: ಉಕ್ಕಿನ ಮಹಿಳೆ ಎಂದೇ ಖ್ಯಾತಿ ಪಡೆದಿರುವ ಮಾನವ ಹಕ್ಕುಗಳ ಹೋರಾಗಾರ್ತಿ ಇರೋಮ್ ಶರ್ಮಿಳಾ ಅವರು ರಚಿಸಿರುವ ನೂತನ ಪಕ್ಷಕ್ಕೆ ದೇಣಿಗಗಳು ಹರಿದುಬರುತ್ತಿದ್ದು, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಬಳಿಕ ಆಪ್ ಸಂಸದ ಭಗವಂತ್ ಮನ್ ಅವರೂ ಕೂಡ ತಮ್ಮ ಒಂದು ತಿಂಗಳ ವೇತನವನ್ನು ಶರ್ಮಿಳಾ ಅವರ ನೂತನ ಪಕ್ಷಕ್ಕೆ ನೀಡಿದ್ದಾರೆ.

ಇತ್ತೀಚೆಗಷ್ಟೇ ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಅವರು ಇರೋಮ್ ಶರ್ಮಿಳಾ ಅವರ ನೂತನ ಪಕ್ಷಕ್ಕೆ ರೂ.50 ಸಾವಿರ ಹಣವನ್ನು ದೇಣಿಗೆಯಾಗಿ ನೀಡಿ, ಶರ್ಮಿಳಾ ಅವರಿಗೆ ಬೆಂಬಲ ನೀಡುವಂತೆ ಜನರಿಗೆ ಕರೆ ನೀಡಿದ್ದರು.

ಇದರ ಬೆನ್ನಲ್ಲೇ ಭಗವಂತ್ ಅವರೂ ಕೂಡ ತಮ್ಮ ಒಂದು ತಿಂಗಳ ವೇತನವನ್ನು ಇರೋಣ್ ಶರ್ಮಿಳಾ ಅವರ ನೂತನ ಪಕ್ಷದ ಅಭಿವೃದ್ಧಿಗೆ ದೇಣಿಗೆಯಾಗಿ ನೀಡುವುದಾಗಿ ಘೋಷಣೆ ಮಾಡಿದ್ದಾರೆ.

ಈ ಕುರಿತಂತೆ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಅವರು, ಭ್ರಷ್ಟಾಚಾರ ಹಾಗೂ ಮಣಿಪುರದ ನ್ಯಾಯಕ್ಕಾಗಿ ಇರೋಮ್ ಶರ್ಮಿಳಾ ಅವರು ಹೋರಾಟ ಮಾಡುತ್ತಿದ್ದು, ನಾನೊಬ್ಬ ಸಂಸತ್ತಿನ ಸದಸ್ಯನಾಗಿದ್ದು ಶರ್ಮಿಳಾ ಅವರಿಗೆ ನನ್ನ ಒಂದು ತಿಂಗಳ ವೇತನವನ್ನು ನೀಡುತ್ತಿದ್ದೇನೆಂದು ಹೇಳಿಕೊಂಡಿದ್ದಾರೆ.

ದೇಣಿಗೆಗೆ ಶರ್ಮಿಳಾ ಅವರ ನೂತನ ಪಕ್ಷ ಜನತಾ ಪುನರುಜ್ಜೀವನ ಮತ್ತು ನ್ಯಾಯ ಮೈತ್ರಿಕೂಟ ಪ್ರತಿಕ್ರಿಯೆ ನೀಡಿದ್ದು, ನಮ್ಮ ಮೇಲೆ ನಂಬಿಕೆಯಿಟ್ಟು ನಮ್ಮ ಹೋರಾಟಕ್ಕೆ ಬೆಂಬಲ ನೀಡುತ್ತಿರುವುದಕ್ಕೆ ಭಗವಂತ್ ಮನ್ ಅವರಿಗೆ ಬಹಳ ಧನ್ಯವಾದಗಳು. ಮಣಿಪುರವನ್ನು ಉತ್ತಮ ರಾಜ್ಯವಾಗಿ ಬದಲಾಯಿಸುತ್ತೇವೆಂದು ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com