
ವಿಶಾಖಪಟ್ಟಣ: ಆಂಧ್ರಪ್ರದೇಶದ ವಿಶಾಖಪಟ್ಟಣಂ ಗ್ರಾಮೀಣ ಪೊಲೀಸರು ಮಿಂಚಿನ ಕಾರ್ಯಾಚರಣೆಯ್ನು ನಡೆಸಿ ಅಂದಾಜು ರೂ.2 ಕೋಟಿ ಮೌಲ್ಯದ 3,200 ಕೆಜಿ ಗಾಂಜಾವನ್ನು ಚಿಂತಲಪಲ್ಲಿವೀದಿಯ ಪದೇರು ಬಳಿ ಮಂಗಳವಾರ ವಶಕ್ಕೆ ಪಡೆದುಕೊಂಡಿದ್ದಾರೆ.
ಗಾಂಜಾವನ್ನು ಸಾಗಣೆ ಮಾಡುತ್ತಿದ್ದ ಮೂವರನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದು, ಬಂಧಿತರನ್ನು ಕೆ.ದುಗ್ಗಿ ನಾಯ್ಡು (45), ಕೆ. ರಾಜೇಶ್ 927) ಮತ್ತು ಎಂ. ನವೀನ್ ಎಂದು ಗುರ್ತಿಸಲಾಗಿದೆ.
ಆರೋಪಿಗಳು ಚಿಂತಲಪಲ್ಲಿವೀದಿಯಿಂದ ಅಂಕಾಪಲ್ಲಿಗೆ ಗಾಂಜಾವನ್ನು ರವಾನೆ ಮಾಡುತ್ತಿದ್ದು. ನಂತರ ಇಲ್ಲಿಂದ ಇತರೆ ಪ್ರದೇಶಗಳಿಗೆ ವಿತರಣೆಮಾಡಲು ಯೋಜನೆ ರೂಪಿಸಿದ್ದರು. ಖಚಿತ ಮಾಹಿತಿ ಆಧಾರದ ಮೇಲೆ ಪೊಲೀಸರು ವಾಹನವನ್ನು ತಡೆದು ಪರಿಶೀಲನೆ ನಡೆಸಿ ರೂ.2 ಕೋಟಿ ಮೌಲ್ಯದ ಗಾಂಜಾವನ್ನು ವಶಕ್ಕೆ ಪಡೆದುಕೊಂಡಿದದಾರೆ.
ಆಯಿಲ್ ಟ್ಯಾಂಕರ್ ನಲ್ಲಿ ಗಾಂಜಾವನ್ನು ಸಾಗಾಣೆ ಮಾಡಲಾಗುತ್ತಿತ್ತು. ಟ್ಯಾಂಕ್ರ ದುಗ್ಗಿ ನಾಯ್ಡು ಅವರಿಗೆ ಸೇರಿದ್ದಾಗಿತ್ತು. ಹೈದರಾಬಾದ್ ನಿಂದ ಟ್ಯಾಂಕರ್ ನ್ನು ತರಲಾಗಿದ್ದು, ಟ್ಯಾಂಕರ್ ನ್ನು ಗಾಂಜಾ ಸಾಗಾಣಿಕೆಗೆ ಬಳಕೆ ಮಾಡುತ್ತಿದ್ದರು. ಟ್ಯಾಂಕರ್ ಅಲ್ಲದೆಯೇ ಸ್ಕಾರ್ಪಿಯೋ ಕಾರಿನಲ್ಲೂ ಗಾಂಜಾವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
Advertisement