ರೋಹಿತ್ ವೇಮುಲ ಡೆತ್'ನೋಟ್ ಓದಿ ಅತ್ತುಬಿಟ್ಟಿದ್ದೆ; ವರುಣ್ ಗಾಂಧಿ

ದೇಶದಾದ್ಯಂತ ತೀವ್ರ ವಿವಾದಕ್ಕೆ ಎಡೆಮಾಡಿಕೊಂಟ್ಟಿದ್ದ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲ ಆತ್ಮಹತ್ಯೆಗೂ ಮುನ್ನ ಬರೆದಿಟ್ಟಿದ್ದ ಡೆತ್ ನೋಟ್ ಓದಿ ದುಃಖ ತಡೆಯಲು ಸಾಧ್ಯವಾಗದೆ ಕಣ್ಣೀರು ಹಾಕಿದ್ದೆ ಎಂದು ಬಿಜೆಪಿ ಸಂಸದ ವರಣ್ ಗಾಂಧಿಯವರು...
ಬಿಜೆಪಿ ಸಂಸದ ವರಣ್ ಗಾಂಧಿ
ಬಿಜೆಪಿ ಸಂಸದ ವರಣ್ ಗಾಂಧಿ

ನವದೆಹಲಿ: ದೇಶದಾದ್ಯಂತ ತೀವ್ರ ವಿವಾದಕ್ಕೆ ಎಡೆಮಾಡಿಕೊಂಟ್ಟಿದ್ದ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲ ಆತ್ಮಹತ್ಯೆಗೂ ಮುನ್ನ ಬರೆದಿಟ್ಟಿದ್ದ ಡೆತ್ ನೋಟ್ ಓದಿ ದುಃಖ ತಡೆಯಲು ಸಾಧ್ಯವಾಗದೆ ಕಣ್ಣೀರು ಹಾಕಿದ್ದೆ ಎಂದು ಬಿಜೆಪಿ ಸಂಸದ ವರಣ್ ಗಾಂಧಿಯವರು ಬುಧವಾರ ಹೇಳಿದ್ದಾರೆ.

ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯದ ಪಿಹೆಚ್'ಡಿ ವಿದ್ಯಾರ್ಥಿಯಾಗಿದ್ದ ರೋಹಿತ್ ವೇಮುಲಾ ಅವರು ಕಳೆದ ವರ್ಷ ಆತ್ಮಹತ್ಯೆ ಮಾಡಿಕೊಂಡಿದ್ದರು.

ಮಧ್ಯಪ್ರದೇಶದ ಇಂದೋರ್ ನಲ್ಲಿ ಖಾಸಗಿ ಶಾಲೆಯೊಂದು ಹಮ್ಮಿಕೊಂಡಿದ್ದ ವಿಚಾರಣ ಸಂಕಿರಣದಲ್ಲಿ ಮಾತನಾಡಿರುವ ವರುಣ್ ಗಾಂಧಿಯವರು, ಕಳೆದ ವರ್ಷ ರೋಹಿಲ್ ಆತ್ಮಹತ್ಯೆ ಮಾಡಿಕೊಂಡಿದ್ದ. ದಲಿತನಾಗಿ ಹುಟ್ಟಿದ್ದೇ ತಪ್ಪಾಯಿತು ಎಂಬ ಅರ್ಥದಲ್ಲಿ ಪತ್ರ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದ. ಡೆತ್ ನೋಟ್ ನಲ್ಲಿ ರೋಹಿತ್ ಬರೆದಿದ್ದ ಪದಗಳು ನನಗೆ ಸಾಕಷ್ಟು ನೋವನ್ನು ತಂದಿತ್ತು. ದುಃಖ ತಡೆಯಲಾಗದೆ, ನಾನು ಕಣ್ಣೀರು ಹಾಕಿದ್ದೆ ಎಂದು ಹೇಳಿದ್ದಾರೆ.

ಇದೇ ವೇಳೆ ಕಳೆದ ತಿಂಗಳು ಮಧ್ಯಪ್ರದೇಶದಲ್ಲಿ ನಡೆದ ದಲಿತರ ಮೇಲಿನ ತಾರತಮ್ಯದ ಕುರಿತೂ ವರುಣ್ ಗಾಂಧಿಯವರು ಪ್ರಸ್ತಾಪ ಮಾಡಿದ್ದಾರೆ. ಶಾಲೆಗಳಲ್ಲಿ ಕೆಲ ಜಾತಿಯ ಮಹಿಳೆಯರು ಅಡುಗೆ ಮಾಡುತ್ತಾರೆಂಬ ಕಾರಣಕ್ಕೆ ಶೇ.70ರಷ್ಟು ವಿದ್ಯಾರ್ಥಿಗಳು ಊಟವನ್ನೇ ಮಾಡುತ್ತಿರಲಿಲ್ಲ ಎಂದು ಆಘಾತವನ್ನು ವ್ಯಕ್ತಪಡಿಸಿ, ನಾವು ವಿದ್ಯಾರ್ಥಿಗಳಿಗೆ ಏನನ್ನು ಹೇಳಿಕೊಡುತ್ತಿದ್ದೇವೆಂದು ಪ್ರಶ್ನಿಸಿದ್ದಾರೆ.

ಸಂವಿಧಾನವು ಜಾತಿ ಹಾಗೂ ಧರ್ಮದ ಆಧಾರದಲ್ಲಿ ಯಾವುದೇ ತಾರತಮ್ಯ ಮಾಡದಿದ್ದರೂ, ದೇಶದ ಶೇ.37ರಷ್ಟು ದಲಿತರು ಬಡತನ ರೇಖೆಯಡಿಯಲ್ಲಿ ಬದುಕುತ್ತಿದ್ದಾರೆ. ಶೇ.8ರಷ್ಟು ದಲಿತ ಮಕ್ಕಳು ತಮ್ಮ ಮೊದಲ ಹುಟ್ಟುಹಬ್ಬದ ಆಚರಣೆಗೂ ಮುನ್ನವೇ ಸಾವನ್ನಪ್ಪುತ್ತಿದ್ದಾರೆಂದು ವರಣ್ ಗಾಂಧಿಯವರು ವಿಷಾದ ವ್ಯಕ್ತಪಡಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com