ದೆಹಲಿಯಲ್ಲಿ ಎಸ್ ಬಿಐ ಎಟಿಎಂನಿಂದಲೇ ಬಂತು 2,000 ರು. ನಕಲಿ ನೋಟು

ದೆಹಲಿಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಟಿಎಂನಿಂದಲೇ 2000 ರುಪಾಯಿ ನಕಲಿ ನೋಟು ಗ್ರಾಹಕರೊಬ್ಬರ ಕೈ ಸೇರಿದ್ದು,...
ನಕಲಿ ನೋಟ್
ನಕಲಿ ನೋಟ್
ನವದೆಹಲಿ: ದೆಹಲಿಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಟಿಎಂನಿಂದಲೇ 2000 ರುಪಾಯಿ ನಕಲಿ ನೋಟು ಗ್ರಾಹಕರೊಬ್ಬರ ಕೈ ಸೇರಿದ್ದು, ಈ ಕುರಿತು ದೆಹಲಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳೆದ ಫೆಬ್ರವರಿ 6ರಂದು ದೆಹಲಿಯ ಸಂಗಮ್ ವಿಹಾರ್ ನಲ್ಲಿರುವ ಎಸ್.ಬಿ.ಐ ಎಟಿಎಂನಲ್ಲಿ ರೋಹಿತ್ ಎಂಬುವವರು 8 ಸಾವಿರ ರುಪಾಯಿ ಡ್ರಾ ಮಾಡಿದ್ದು, 'ಚಿಲ್ಡ್ರನ್ ಬ್ಯಾಂಕ್ ಆಫ್ ಇಂಡಿಯಾ' ಹೆಸರಿನಲ್ಲಿರುವ 2000 ರುಪಾಯಿ ಮುಖಬೆಲೆಯ ನಾಲ್ಕು ನಕಲಿ ನೋಟುಗಳು ಬಂದಿವೆ.
ಈ ನೋಟುಗಳು ನೋಡಲು ಅಸಲಿ ಎರಡು ಸಾವಿರದ ನೋಟುಗಳಂತೆಯೇ ಕಾಣುತ್ತಿದ್ದವು. ಆದರೆ ಸೂಕ್ಷವಾಗಿ ಗಮನಿಸಿದಾಗ ಹಲವು ತಪ್ಪುಗಳು ಈ ನೋಟಿನಲ್ಲಿ ಮುದ್ರಣವಾಗಿರುವುದನ್ನು ಪತ್ತೆ ಹಚ್ಚಿ ಪೊಲೀಸರಿಗೆ ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಈ ಸಂಬಂಧ ಬ್ಯಾಂಕ್ ಅಧಿಕಾರಿಗಳನ್ನು ಸಂಪರ್ಕಿಸಿದ್ದು, ತನಿಖೆ ನಡೆಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com