ಹೆಚ್‌-1 ಬಿ ವೀಸಾ; ಸಮತೋಲಿತ, ದೂರದೃಷ್ಟಿ ನಿಲುವು ಬೆಳೆಸಿಕೊಳ್ಳಿ: ಅಮೆರಿಕಾಗೆ ಮೋದಿ

ಪ್ರಧಾನಿ ನರೇಂದ್ರ ಮೋದಿ ಭಾರತೀಯ ಐಟಿ ಕ್ಷೇತ್ರದವರು ಅಮೆರಿಕಾಗೆ ಬಾರದಂತೆ ಕೈಗೊಂಡಿರುವ ಕ್ರಮಗಳನ್ನು ಕೈಬಿಡಬೇಕು ಎಂಬ ಸಂದೇಶ ರವಾನೆ ಮಾಡಿದ್ದಾರೆ.
ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ನರೇಂದ್ರ ಮೋದಿ
ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ನರೇಂದ್ರ ಮೋದಿ
ನವದೆಹಲಿ: ಭಾರತಕ್ಕೆ ಭೇಟಿ ನೀಡಿದ್ದ ಅಮೆರಿಕ ಸಂಸದರ ನಿಯೋಗದೊಂದಿಗೆ ಮಾತುಕತೆ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ ಭಾರತೀಯ ಐಟಿ ಕ್ಷೇತ್ರದವರು ಅಮೆರಿಕಾಗೆ ಬಾರದಂತೆ ಕೈಗೊಂಡಿರುವ ಕ್ರಮಗಳನ್ನು ಕೈಬಿಡಬೇಕು ಎಂಬ ಸಂದೇಶ ರವಾನೆ ಮಾಡಿದ್ದಾರೆ. 
ಆರ್ಥಿಕ ವಿಚಾರಗಳಲ್ಲಿ ರಕ್ಷಣಾತ್ಮಕ ನಿಲುವುಗಳು ಸೂಕ್ತವಲ್ಲ ಎಂದು ಅಭಿಪ್ರಾಯಪಟ್ಟಿರುವ ನರೇಂದ್ರ ಮೋದಿ, ಭಾರತದ ವೃತ್ತಿಪರರು ಅಮೆರಿಕ ಪ್ರವೇಶಿಸದಂತೆ ವೀಸಾ ಕಡಿವಾಣ ಹಾಕುವುದು ಸರಿಯಲ್ಲ. ಆದ್ದರಿಂದ ಅಮೆರಿಕ ಇಂತಹ ವಿಚಾರಗಳಲ್ಲಿ ಸಮತೋಲಿತ, ದೂರದೃಷ್ಟಿ ನಿಲುವು ಬೆಳೆಸಿಕೊಳ್ಳಬೇಕು ಎಂದು ಪ್ರಧಾನಿ ಅಮೆರಿಕ ಸಂಸದರಿಗೆ ಕರೆ ನೀಡಿದ್ದಾರೆ. 
ಅಮೆರಿಕಾದ ಅಭಿವೃದ್ಧಿಗೆ ಭಾರತೀಯ ಐಟಿ ಉದ್ಯಮಿಗಳ ಕೊಡುಗೆ ಅಪಾರವಾಗಿದೆ. ಭಾರತೀಯ ಐಟಿ ನೌಕರರಿಗೆ ವೀಸಾ ನೀಡುವ ವಿಚಾರವಾಗಿ ಅಮೆರಿಕಾ ಸಮತೋಲಿತ ನಿಲುವು ಹೊಂದಿರಬೇಕು, ಹೆಚ್-1 ಬಿ ವೀಸಾ ಒಬ್ಬರಿಗೆ ಮಾತ್ರ ಪ್ರಯೋಜನವಾಗುವ ಒನ್ ವೇ ದಾರಿಯಾಗಬಾರದೆಂದು ಪ್ರಧಾನಿ ನರೇಂದ್ರ ಮೋದಿ ಹೇಳಿರುವುದಾಗಿ ಪ್ರಧಾನಿ ಕಾರ್ಯಾಲಯ ಮಾಹಿತಿ ನೀಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com