ಸೋಲುವ ಭೀತಿಯಿಂದ ಪ್ರಧಾನಿ ಮೋದಿ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ: ರಾಹುಲ್ ಗಾಂಧಿ

ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿರುದ್ಧ ಆರೋಪಗಳನ್ನು ಮುಂದುವರಿಸಿರುವ ಕಾಂಗ್ರೆಸ್ ಉಪಾಧ್ಯಕ್ಷ...
ರಾಹುಲ್ ಗಾಂಧಿ
ರಾಹುಲ್ ಗಾಂಧಿ
ಅಮೇಥಿ(ಉತ್ತರ ಪ್ರದೇಶ): ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿರುದ್ಧ ಆರೋಪಗಳನ್ನು ಮುಂದುವರಿಸಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ,ಚುನಾವಣೆಯಲ್ಲಿ ಸೋಲುವ ಭಯದಿಂದ ಪ್ರಧಾನಿ ಮೋದಿಯವರು ರಾಜಕೀಯ ದ್ವೇಷ ಮಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.
ಅಮೇಥಿಯಲ್ಲಿಂದು ರಾಜಕೀಯ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಉತ್ತರ ಪ್ರದೇಶ ಚುನಾವಣೆಯಲ್ಲಿ ಬಿಜೆಪಿ ಸೋಲುತ್ತದೆ ಎಂದು ಪ್ರಧಾನಿಯವರಿಗೆ ಭೀತಿ ಉಂಟಾಗಿದೆ. ಅವರ ಭಾವನೆ ಇತ್ತೀಚೆಗೆ ಬದಲಾಗಿದ್ದು ನೀವು ನೋಡಬಹುದು. ಹಿಂದೆಲ್ಲಾ ಸಂತೋಷದಿಂದ ಇದ್ದ ಅವರು ಈಗ ಆತಂಕದಲ್ಲಿರುತ್ತಾರೆ. ಇದೀಗ ರಾಜ್ಯದ ಜನತೆಯನ್ನು ವಿಭಜಿಸಲು ಹೊರಟಿದ್ದಾರೆ. ದ್ವೇಷವನ್ನು ಹರಡುತ್ತಿದ್ದಾರೆ. ಆದರೆ ಉತ್ತರ ಪ್ರದೇಶದ ಜನರು ಅವರ ಮಾತುಗಳನ್ನು ಕೇಳುವುದಿಲ್ಲ. ಇಲ್ಲಿನವರು ಸಮಾಜವಾದಿ-ಕಾಂಗ್ರೆಸ್ ಮೈತ್ರಿಕೂಟಕ್ಕೆ ಮತ ಹಾಕಿ ಗೆಲ್ಲಿಸುತ್ತಾರೆ ಎಂದು ಅವರಿಗೆ ಹೇಳಲು ಇಚ್ಛಿಸುತ್ತೇನೆ ಎಂದರು.
ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಹೆಸರನ್ನು ಅನೇಕ ರ್ಯಾಲಿಗಳಲ್ಲಿ ಬಳಸುವುದಕ್ಕೆ, ಬಿಜೆಪಿ ಈ ದೇಶಕ್ಕೆ ಹಲವು ಮಹಾನ್ ನಾಯಕರನ್ನು ಕೊಡುಗೆಯಾಗಿ ನೀಡಿಲ್ಲ ಎಂಬುದು ಸತ್ಯ. ಜನರ ಮಧ್ಯೆ ಕಂದಕ ತರಲು ಮಹಾನ್ ನಾಯಕರ ಹೆಸರನ್ನು ಬಳಸದಂತೆ ಅವರು ಒತ್ತಾಯಿಸಿದರು.
ಸರ್ದಾರ್ ಪಟೇಲ್ ಅವರ ಹೆಸರನ್ನು ಹೇಳಿಕೊಂಡು ಅವರನ್ನು ಆರ್ಎಸ್ಎಸ್ ಸಿಬ್ಬಂದಿ ಎಂದು ಮುದ್ರೆ ಹಚ್ಚಲು ಸಾಧ್ಯವಿಲ್ಲ ಎಂದು ರಾಹುಲ್ ಗಾಂಧಿ ನುಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com