ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇಸ್ರೇಲ್ ನೊಂದಿಗೆ 17,000 ಕೋಟಿ ರೂ ಮೊತ್ತದ ರಕ್ಷಣಾ ಕ್ಷಿಪಣಣಿ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.
ಮಧ್ಯಮ ಶ್ರೇಣಿಯ ಸರ್ಫೇಸ್ ಟು ಏರ್ ಡಿಫೆನ್ಸ್ ಕ್ಷಿಪಣಿಯನ್ನು(ಎಂಆರ್-ಎಸ್ಎಎಂ) ವ್ಯವಸ್ಥೆಯನ್ನು ಇಸ್ರೇಲ್ ನಿಂದ ಖರೀದಿಸುವ ಒಪ್ಪಂದ ಇದಾಗಿದ್ದು, ಸುಮಾರು 17,000 ಕೋಟಿ ರೂಪಾಯಿ ವೆಚ್ಚದಲ್ಲಿ ಕ್ಷಿಪಣಿಯನ್ನು ಪೂರೈಕೆ ಮಾಡಲಾಗುತ್ತದೆ.
ಯೋಜನೆಯ ಪ್ರಕಾರ ಭಾರತೀಯ ಸೇನೆ 40 ಫೈರಿಂಗ್ ಯುನಿಟ್ ಗಳಿರುವ 200 ಕ್ಷಿಪಣಿಗಳ 5 ಕ್ಕಿಂತ ಹೆಚ್ಚು ಎಂಆರ್-ಎಸ್ಎಎಂ ರೆಜಿಮೆಂಟ್ ಗಳನ್ನು ಸೇನೆಗೆ ಸೇರ್ಪಡೆ ಮಾಡಿಕೊಳ್ಳಲಿದೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಭದ್ರತಾ ಸಂಪುಟ ಸಮಿತಿ ಒಪ್ಪಿಗೆ ನೀಡಿದೆ.
ಎಂಆರ್-ಎಸ್ಎಎಂ ವ್ಯವಸ್ಥೆಯನ್ನು ಡಿಆರ್ ಡಿಒ ಹಾಗೂ ಇಸ್ರೇಲ್ ನ ಏರ್ ಕ್ರಾಫ್ಟ್ ಇಂಡಸ್ಟ್ರಿ ಜಂಟಿ ಸಹಯೋಗದಲ್ಲಿ ಅಭಿವೃದ್ಧಿಪಡಿಸಿದ್ದು, 50-70 ಕಿಮಿ ವ್ಯಾಪ್ತಿಯಲ್ಲಿ ಶತ್ರುಗಳ ಯುದ್ಧವಿಮಾನವನ್ನು ಹೊಡೆದುರುಳಿಸುವ ಸಾಮರ್ಥ್ಯ ಹೊಂದಿದೆ.