ಬಿಎಂಸಿ ಮೇಯರ್ ಶಿವಸೇನೆಯವರೇ ಆಗಿರಲಿದ್ದಾರೆ: ಶಿವಸೇನೆ

ಮಹಾರಾಷ್ಟ್ರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ 82 ಸ್ಥಾನಗಳನ್ನು ಪಡೆದಿರುವ ಶಿವಸೇನೆ ಬಿಎಂಸಿ ಮೇಯರ್ ತಮ್ಮ ಪಕ್ಷದಿಂದಲೇ ಆಯ್ಕೆಯಾಗಲಿದ್ದಾರೆ ಎಂದು ಹೇಳಿದೆ.
ಶಿವಸೇನೆ ಮುಖಂಡ ಉದ್ಧವ್ ಠಾಕ್ರೆ
ಶಿವಸೇನೆ ಮುಖಂಡ ಉದ್ಧವ್ ಠಾಕ್ರೆ
ಮುಂಬೈ: ಮಹಾರಾಷ್ಟ್ರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ 82 ಸ್ಥಾನಗಳನ್ನು ಪಡೆದಿರುವ ಶಿವಸೇನೆ ಬಿಎಂಸಿ ಮೇಯರ್ ತಮ್ಮ ಪಕ್ಷದಿಂದಲೇ ಆಯ್ಕೆಯಾಗಲಿದ್ದಾರೆ ಎಂದು ಹೇಳಿದೆ. 
ಚುನಾವಣೆಯ ಫಲಿತಾಂಶ ಹೊರಬಂದ ನಂತರ ತನ್ನ ಮುಖವಾಣಿ ಸಾಮ್ನಾ ಪತ್ರಿಕೆಯಲ್ಲಿ ಸಂಪಾದಕೀಯ ಬರೆದಿರುವ ಶಿವಸೇನೆ, ಬಿಜೆಪಿ ವಿರುದ್ಧ ಕಿಡಿ ಕಾರಿದ್ದು, ತನ್ನನ್ನು ಅಸ್ಥಿರಗೊಳಿಸಲು ಸಂಚು ರೂಪಿಸಿದೆ ಎಂದು ಆರೋಪಿಸಿದೆ. ಈ ಮೂಲಕ ಶಿವಸೇನೆ ಬಿಜೆಪಿಯೊಂದಿಗಿನ ಚುನಾವಣೋತ್ತರ ಮೈತ್ರಿಯನ್ನು ನಿರಾಕರಿಸಿರುವ ಸೂಚನೆ ನೀಡಿದಂತಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. 
ಶಿವಸೇನೆ ಮುಂಬೈ ಮಹಾನಗರ ಪಾಲಿಕೆಯನ್ನು 25 ವರ್ಷಗಳಿಂದ ಆಳುತ್ತಿದೆ. ನಮ್ಮ ಆಡಳಿತವನ್ನು ಅಸ್ಥಿರಗೊಳಿಸಲು ಬಿಜೆಪಿ ಸಂಚು ರೂಪಿಸಿದೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗಲೂ ಈ ರೀತಿಯಾಗಿರಲಿಲ್ಲ ಎಂದು ಶಿವಸೇನೆ ಕಿಡಿ ಕಾರಿದೆ. ಬಿಎಂಸಿ ಚುನಾವಣೆಗಾಗಿ ಬಿಜೆಪಿ ತನ್ನಲ್ಲಿದ್ದ ಎಲ್ಲವನ್ನೂ ಬಳಕೆ ಮಾಡಿದೆ. ಆದರೂ ಪಡೆಯಲು ಸಾಧ್ಯವಾಗಿದ್ದು ಕೇವಲ 82 ಸ್ಥಾನಗಳನ್ನು ಮಾತ್ರ. ಮೇಯರ್ ಸಹ ಶಿವಸೇನೆಯಿಂದಲೇ ಆಯ್ಕೆಯಾಗಲಿದ್ದಾರೆ ಎಂದು ಶಿವಸೇನೆ ಸ್ಪಷ್ಟಪಡಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com