ವೈಯಕ್ತಿಕ ದಾಳಿಯಲ್ಲದೆ, ತತ್ವಗಳ ಮೂಲಕ ಮತ ಕೇಳಿ: ಪ್ರಧಾನಿ ಮೋದಿಗೆ ಕಾಂಗ್ರೆಸ್

ಉತ್ತರಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ವಿರುದ್ಧ ವಾಗ್ದಾಳಿ ನಡೆಸಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ವಿರುದ್ದ ಕಾಂಗ್ರೆಸ್ ಕಿಡಿಕಾರಿದ್ದು, ಪ್ರಧಾನಿ ಮೋದಿಯವರು ವೈಯಕ್ತಿಕ ದಾಳಿಯನ್ನು ಬಿಟ್ಟು, ನೀತಿ ಹಾಗೂ ತತ್ತ್ವಗಳ...
ಕಾಂಗ್ರೆಸ್ ನಾಯಕ ದ್ವಿಜೇಂದ್ರ ತ್ರಿಪಾಠಿ
ಕಾಂಗ್ರೆಸ್ ನಾಯಕ ದ್ವಿಜೇಂದ್ರ ತ್ರಿಪಾಠಿ
ನವದೆಹಲಿ: ಉತ್ತರಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ವಿರುದ್ಧ ವಾಗ್ದಾಳಿ ನಡೆಸಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ವಿರುದ್ದ ಕಾಂಗ್ರೆಸ್ ಕಿಡಿಕಾರಿದ್ದು, ಪ್ರಧಾನಿ ಮೋದಿಯವರು ವೈಯಕ್ತಿಕ ದಾಳಿಯನ್ನು ಬಿಟ್ಟು, ನೀತಿ ಹಾಗೂ ತತ್ತ್ವಗಳ ಮುಖಾಂತರ ಮತಯಾಚನೆ ಮಾಡಬೇಕಿದೆ ಎಂದು ಶುಕ್ರವಾರ ಹೇಳಿದೆ. 
ಈ ಕುರಿತಂತೆ ಮಾತನಾಡಿರುವ ಕಾಂಗ್ರೆಸ್ ನಾಯಕ ದ್ವಿಜೇಂದ್ರ ತ್ರಿಪಾಠಿಯವರು 2014ರ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಜನರು ಮತ ಹಾಕಿದ್ದರು. ಮೋದಿಯವರು ಯಾವ ರೀತಿಯಲ್ಲಿ ಮತಯಾಚನೆ ಮಾಡಿದ್ದರು ಎಂಬುದನ್ನು ಹೇಳಲು ನಮ್ಮಲ್ಲಿ ಗ್ರಂಥಾಲಯವಿಲ್ಲ. ಮೋದಿಯವರಿಗೆ ಮತ ಹಾಕಿದ ಜನತೆಗೆ ಇದೀಗ ನಮಗೆ ದ್ರೋಹ ಬಗೆಯುತ್ತಿದ್ದಾರೆಂಬ ಭಾವನೆಗಳು ಮೂಡತೊಡಗಿವೆ ಎಂದು ಹೇಳಿದ್ದಾರೆ. 
ಪ್ರಧಾನಿ ಮೋದಿಯವರು ಜನತೆಗೆ ಸುಳ್ಳು ಭರವಸೆಗಳನ್ನು ನೀಡಿದ್ದಾರೆ. ಜನತೆಯ ಬ್ಯಾಂಕ್ ಖಾತೆಗಳಿಗೆ ಈ ವರೆಗೂ ರೂ.15 ಲಕ್ಷ ಹಣ ಜಮೆಯಾಗಿಲ್ಲ. ಯುವಕರಿಗೆ ಉದ್ಯೋಗಾವಕಾಶಗಳು ದೊರೆತಿಲ್ಲ. ನೀಡಿದ್ದ ಯಾವುದೇ ಭರವಸೆಗಳನ್ನು ಅವರು ಈಡೇರಿಸಿಲ್ಲ ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com